Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಅದರಂತೆಯೇ ಎರಡೂ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟ ಬೇಡಿಕೆಗಳಿಗೂ ಸ್ಪಂದಿಸಬೇಕೆಂಬ ಜನಾಗ್ರಹ ಕೇಳಿಬಂದಿದೆ.
Related Articles
Advertisement
ಪ್ರಮುಖ ಬೇಡಿಕೆಗಳೇನು? :
ದಕ್ಷಿಣ ಕನ್ನಡ ಜಿಲ್ಲೆ :
- ಪಶ್ಚಿಮ ವಾಹಿನಿ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ.
- ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹೆಚ್ಚುವರಿ ಅನುದಾನ.
- ಗ್ರಾಮಾಂತರ ರಸ್ತೆ, ಸೇತುವೆ ಸಹಿತ ಅಗತ್ಯ ಮೂಲ ಸೌಲಭ್ಯಗಳಿಗೆ ನೆರವು.
- ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್ ನಿಲ್ದಾಣ. ಸ್ಮಾರ್ಟ್ ಯೋಜನೆಯಡಿ ಪಿಪಿ ಮಾಡೆಲ್‌ನಲ್ಲಿ ಬಸ್ ನಿಲ್ದಾಣಕ್ಕೆ ಹಲವು ಬಾರಿ ಟೆಂಡರ್ ಕರೆದರೂ ಆಗಿಲ್ಲ. ಸರಕಾರವೇ ಮುಂದೆ ಬಂದು ಬಸ್ ನಿಲ್ದಾಣ ಕಟ್ಟಿಸಬೇಕಿದೆ.
- ಭೂ ಸಾರಿಗೆ, ವಿಮಾನ, ರೈಲ್ವೇ, ಬಂದರು ಸಹಿತ ಎಲ್ಲ ಸಾರಿಗೆ ಮೂಲಗಳಿರುವ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕು.
- ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆಗೆ ಅನುಕೂಲಕರ ಐ.ಟಿ. ಪಾರ್ಕ್.
- ತುಳು ಭಾಷೆಯನ್ನು 8ನೇ ಪರಿಚ್ಛೇದ ದಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗು ವಂತೆ ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು.
- ಮಂಗಳೂರು ರೈಲ್ವೇ ಭಾಗವನ್ನು ನೈಋತ್ಯ ರೈಲ್ವೇ ವಲಯದ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ರೈಲ್ವೇ ಸಚಿವಾಲಯದ ಮೇಲೆ ಒತ್ತಡ ಹೇರಬೇಕು.
- ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
- ಕರಾವಳಿಯಲ್ಲಿ ಪ್ರತೀ ವರ್ಷ ಭತ್ತದ ಕೊಯ್ಲು ಮುಗಿದು ತಿಂಗಳ ಬಳಿಕ ಬೆಂಬಲ ಬೆಲೆ ಘೋಷಣೆಯಾಗುತ್ತದೆ. ಇದರಿಂದ ಕೃಷಿಕರಿಗೆ ನಷ್ಟವಾಗುತ್ತಿದೆ. ಹಾಗಾಗಿ ಭತ್ತದ ಕೊಯ್ಲಿಗೆ ಮೊದಲೇ (ಅಕ್ಟೋಬರ್‌ನೊಳಗೆ) ಬೆಂಬಲ ಬೆಲೆ ಘೋಷಿಸಬೇಕು.
- ಉಡುಪಿ ಜಿಲ್ಲೆಯಲ್ಲಿ ಸರಕಾರಿ ಮೆಡಿ ಕಲ್ ಕಾಲೇಜು ನಿರ್ಮಾಣದ ಒತ್ತಾಯಕ್ಕೆ ಸ್ಪಂದಿಸಬೇಕು. ಇದರಿಂದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ.
- ತೌಖ್ತೆ ಚಂಡಮಾರುತದಿಂದ ಸುಮಾರು 90 ಕೋ.ರೂ. ನಷ್ಟ ಉಂಟಾಗಿದೆ. ಇದರಲ್ಲಿ ಬಹುಪಾಲು ಸಮುದ್ರ ತಡೆಗೋಡೆ ಕಾಮಗಾರಿಗೆ ಸಂಬಂಧಿಸಿದ್ದು. ಇದಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಪ್ಯಾಕೇಜ್ ನೀಡಬೇಕಿದೆ. ಕೊರೊನಾ ಲಸಿಕೆಗಳ ಪೂರೈಕೆ, ಆಸ್ಪತ್ರೆಗಳ ಅಭಿವೃದ್ಧಿ ಕೂಡಲೇ ಆಗಬೇಕು.
- ಹದಿನೈದು ವರ್ಷಗಳಿಂದ ಮುಚ್ಚಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು. ರಾಜ್ಯದಲ್ಲಿ 152 ಸಂಸ್ಥೆಗಳು ಎಥನಾಲ್ ಘಟಕ ಸ್ಥಾಪನೆಗೆ ಹೆಸರು ನೋಂದಾಯಿಸಿದ್ದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಒಂದು. ಸುಮಾರು 150 ಕೋಟಿ ರೂ. ನಷ್ಟು ಅನುದಾನ ನೀಡಿ ಪುನರಾರಂಭಿಸಬೇಕು.
- ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿರುವುದು ಸೂಕ್ತ. ಆದರೆ ನಿಗದಿತ ಕಾಲ ಮಿತಿಯೊಳಗೆ ಶೀಘ್ರವೇ ಯೋಜನೆ ಜಾರಿಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು.
- ಉಡುಪಿಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ (ಪಿಪಿಪಿ) ಸ್ಮಾರ್ಟ್ ಸಿಟಿ ಯೋಜನೆ (ಮಣಿಪಾಲ-ಉಡುಪಿ-ಮಲ್ಪೆ)ಯನ್ನು ಜಾರಿಗೊಳಿಸಲು ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಕೊಟ್ಟು ಯೋಜನೆ ಜಾರಿಗೆ ಕ್ರಮ ವಹಿಸಬೇಕು.
- ಕೋಟಿ ಚೆನ್ನಯ್ಯ ಥೀಮ್ ಪಾರ್ಕ್: ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್‌ನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡುವ ಕೆಲಸ ಬಾಕಿ ಇದೆ. ಡಾ| ವಿ.ಎಸ್. ಆಚಾರ್ಯರ ಕನಸನ್ನು ಈಗಲಾದರೂ ನನಸಾಗಿಸಬೇಕು.
- ಕಾರ್ಕಳ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾಗಿ ಜವಳಿ ಪಾರ್ಕ್ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ಹೆಬ್ರಿಯ ಚಾರ ಗ್ರಾಮ ದಲ್ಲಿ ಸ್ಥಳ ಗುರುತಿಸಿದ್ದು, 2020ರ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಜವಳಿ ಪಾರ್ಕ್ ಯೋಜನೆ ಜಾರಿಗೊಳಿಸಬೇಕು.