Advertisement
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಮಾತನಾಡಲು ಸಿಎಂ ಬೊಮ್ಮಾಯಿ ಅವರು ನಡ್ಡಾ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಈಗ ನಡ್ಡಾ ಜತೆ ಮಾತುಕತೆ ನಡೆದು ಒಪ್ಪಿಗೆ ಲಭಿಸಿದರೂ ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ, ಡಿಸೆಂಬರ್ 2ನೇ ವಾರದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬಹುದು ಎನ್ನಲಾಗಿದೆ.
ದಿಲ್ಲಿ ಪ್ರವಾಸದ ವಿಚಾರವಾಗಿ ಕಾಂಗ್ರೆಸ್ ಟ್ವಿಟರ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕೆಣಕಿದೆ. “ದಿಲ್ಲಿ ಟೂರ್ ಸಿಎಂ’ ಎಂದು ಗೇಲಿ ಮಾಡಿದ್ದು, ಬೊಮ್ಮಾಯಿಯವರ ಸಂಕಟ ವಿಸ್ತರಣೆಯಾಗುತ್ತಿದೆಯೇ ವಿನಾ ಸಂಪುಟ ವಿಸ್ತರಣೆಯಲ್ಲ ಎಂದು ಲೇವಡಿ ಮಾಡಿದೆ. ಈ ಬಗ್ಗೆ ಅದು ಸರಣಿ ಟ್ವೀಟ್ ಮಾಡಿದೆ.
Related Articles
ಸಿಎಂ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜತೆಗೂಡಿ ಮಂಗಳವಾರ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಭೂಪೇಂದ್ರ ಯಾದವ್‌ರನ್ನು ಭೇಟಿ ಮಾಡಿದರು. ಶೇಖಾವತ್ ಜತೆ ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ, ಮಹದಾಯಿ ಬಗ್ಗೆ ಚರ್ಚಿಸಲಾಯಿತು. ಭೂಪೇಂದ್ರ ಯಾದವ್ ಜತೆ ಪರಿಸರ ಸಂಬಂಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
Advertisement
ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ ಎಂದರು.