Advertisement
ಬಿಯಾಂಡ್ ಬೆಂಗಳೂರು ಇನ್ನೋವೇಶನ್ ಮತ್ತು ಇಂಪ್ಯಾಕ್ಟ್ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಪ್ರತಿಭೆ ಬೇರೆ ಕಡೆ ವಲಸೆ ಹೋಗುತ್ತಿದೆ. ಬೆಂಗಳೂರಿನಲ್ಲಿ ತಮ್ಮ ಪ್ರತಿಭೆ ಏನೆಂಬುದನ್ನು ತೋರಿಸಿದ್ದಾರೆ. ಹಿಂದೆ ಉತ್ತರದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹೆಚ್ಚಿಗೆ ಇರಲಿಲ್ಲ. ಇದೀಗ ತಾಲೂಕಿಗೊಂದು ಇಂಜಿನಿಯರ್ ಕಾಲೇಜುಗಳಾಗಿವೆ. ಪ್ರತಿಭೆಗಳ ಬಳಕೆಗೆ ಪೂರಕ ವಾತಾವರಣ ಸೃಷ್ಟಿಗೆ ಸರಕಾರ ಸಿದ್ದವಿದೆ. ಇದಕ್ಕೆ ಉದ್ಯಮಿಗಳು ಮುಂದೆ ಬರಬೇಕು ಎಂದರು.
Related Articles
Advertisement
ಐಟಿ-ಬಿಟಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಮಾತನಾಡಿ, ಆವಿಷ್ಕಾರ ತಂತ್ರಜ್ಞಾನ ಬಲಗೊಳ್ಳಬೇಕಿದೆ. ಬೆಂಗಳೂರು ಹೊರತಾದ ಪ್ರದೇಶದಲ್ಲಿ ಉದ್ಯಮ ಆರಂಭಕ್ಕೆ ಮುಂದಾದರೆ ಅನೇಕ ರಿಯಾಯಿತಿ, ಸಬ್ಸಿಡಿಗಳು ದೊರೆಲಿವೆ. ಹುಬ್ಬಳ್ಳಿಯಲ್ಲಿ ಸಾಫ್ಟ್‌ವೇರ್ ಪಾರ್ಕ್ ಆರಂಭಕ್ಕೆ 50 ಎಕರೆ ಜಮೀನು ನೀಡಲಾಗುವುದು. ಅದೇ ರೀತಿ ಇನ್ಫೋಸಿಸ್ ಸಹಕಾರದೊಂದಿಗೆ ಹುಬ್ಬಳ್ಳಿಯಲ್ಲಿ ಕೃತಕ ಬುದ್ದಿ ಮತ್ತೆ,ಅಗ್ರಿಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಕ್ಕೆ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉದ್ಯಮಿ ಅರವಿಂದ ಮೆಳ್ಳಿಗೇರಿ ವರ್ಚುವಲ್ ಮೂಲಕ ಮಾತನಾಡಿ, ಹುಬ್ಬಳ್ಳಿಯಲ್ಲಿ ಹಾರ್ಡ್ ವೇರ್, ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳ ವಿನ್ಯಾಸ, ಉತ್ಪಾದನೆ ಉದ್ಯಮ ಆರಂಭಿಸುವುದಾಗಿ ಹೇಳಿದರು.
ಹಿರಿಯ ಅಧಿಕಾರಿಗಳು ,ಉದ್ಯಮಿಗಳು ಪಾಲ್ಗೊಂಡಿದ್ದರು.