Advertisement

ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಬಂದಿಲ್ಲ; ಆದರೆ ಮುಂಜಾಗ್ರತೆ ಇರಲಿ: ಸಿಎಂ ಬೊಮ್ಮಾಯಿ

02:22 PM Apr 28, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಬಂದಿಲ್ಲ. ಆದರೆ‌ ಜನರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 9 ರ ನಂತರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಿದೆ. ಅದನ್ನು ಸರ್ಕಾರ ಗಮನಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳುತ್ತಿದ್ದೇವೆ. ಯುರೋಪ್ ಮತ್ತು ಇತರ ರಾಷ್ಟ್ರಗಳಲ್ಲಿ ಯಾರು ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಅಲ್ಲಿ ಕೋವಿಡ್ ಉಲ್ಬಣಗೊಂಡಿದೆ ಎಂದರು.

ಇದನ್ನೂ ಓದಿ:ಅಕ್ರಮ ಮರಳು ಗಣಿಗಾರಿಕೆ ನಡೆದರೆ ಕಠಿಣ ಕ್ರಮ: ಹಾಲಪ್ಪ ಆಚಾರ್‌

ರಾಜ್ಯದಲ್ಲಿ ಈಗಾಗಲೇ ಶೇ.98 ರಷ್ಟು ವ್ಯಾಕ್ಸಿನೇಷನ್‌ ಆಗಿದೆ. ಬೂಸ್ಟರ್ ಡೋಸ್ ಮತ್ತು ಮುಂಜಾಗ್ರತಾ ಲಸಿಕೆಗಳು ಬಂದಿವೆ. ಅವುಗಳನ್ನು ಜನರಿಗೆ ಕೊಡಲು ಗಮನ ಹರಿಸುತ್ತಿದ್ದೇವೆ. ಕೇಂದ್ರ ಸರ್ಕಾರ 6 ರಿಂದ 12 ವರ್ಷದವರಿಗೆ ವ್ಯಾಕ್ಸಿನೇಷನ್‌ ಮಾಡಲು ಅನುಮತಿ ನೀಡಿದೆ. ಹೀಗಾಗಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕಾಕರಣ ಮಾಡಲು  ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ವ್ಯಾಕ್ಸಿನೇಷನ್‌, ಟೆಸ್ಟ್ ಆಗುವಂತೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next