ಮೈಸೂರು: ಮೇಕೆದಾಟು ಯೋಜನೆ ತಡೆ ಹಿಡಿಯಲು ಸುಪ್ರೀಂಕೋರ್ಟ್‌ಗೆ ತಮಿಳುನಾಡು ಅರ್ಜಿ ಹಾಕಿರುವುದು ನ್ಯಾಯ ಸಮ್ಮತವಲ್ಲ. ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಕ್ರಮವೂ ಅಲ್ಲ ಎಂದು ತಮಿಳುನಾಡಿನ ನಡೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಖಂಡಿಸಿದರು.
ನಗರದಲ್ಲಿ ಮಾತಾನಾಡಿದ ಅವರು, ಸುಪ್ರೀಂಕೋರ್ಟ್ ನಮಗೆ ನೋಟಿಸ್ ಕೊಟ್ಟಿದ್ದು,. ಅದಕ್ಕೆ ನಾವು ಸಮರ್ಥವಾದ ಉತ್ತರ ಕೊಟ್ಟಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಸುಪ್ರೀಂಕೋರ್ಟ್ ಆದೇಶದನ್ವಯ ರಚನೆಯಾಗಿದೆ. ಕಾವೇರಿ ನದಿಗೆ ಸಂಬಂಧಪಟ್ಟಂತೆ ಯಾವ ಯೋಜನೆ ಜಾರಿಗೊಳಿಸಬೇಕು, ಜಾರಿಗೊಳಿಸಬಾರದು ಎಂದು ತೀರ್ಮಾನ ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಮಾತ್ರ ಇದೆ. ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ 16-17 ಸಭೆಗಳು ಆಗಿವೆ ಎಂದರು.
ಇದನ್ನೂ ಓದಿ: ಗೃಹ, ವಾಹನ ಸಾಲದ ಇಎಂಐ ಹೊರೆ ಏರಿಕೆ: ಆರ್ ಬಿಐನಿಂದ ಮತ್ತೆ ರೆಪೋ ದರ ಹೆಚ್ಚಳ
ಲೊಕಾಯುಕ್ತ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ತೀರ್ಘವೇ ಲೋಕಾಯುಕ್ತ ನೇಮಕವಾಗುತ್ತದೆ. ಆ ವಿಚಾರದಲ್ಲಿ ಇನ್ನು ವಿಳಂಬವಾಗುವುದಿಲ್ಲ ಎಂದರು.
ರಾಜ್ಯಸಭಾ ಚುನಾವಣಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್- ಕಾಂಗ್ರೆಸ್ ಏನು ಮಾಡುತ್ತಾರೋ ಗೊತ್ತಿಲ್ಲ. ನಮಗೆ 3 ಸ್ಥಾನ ಗೆಲ್ಲಲು ಮತಗಳಿವೆ. ನಾವು ಚುನಾವಣೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.