Advertisement

ಗಡಿ ವಿವಾದ: ಕೇಂದ್ರ ಗೃಹ ಸಚಿವರಿಗೆ ಕಾನೂನಾತ್ಮಕವಾಗಿ ರಾಜ್ಯದ ನಿಲುವು ಮನವರಿಕೆ ಮಾಡುತ್ತೇವೆ; ಸಿಎಂ

02:44 PM Dec 14, 2022 | Team Udayavani |

ಹುಬ್ಬಳ್ಳಿ : ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದ ಉಭಯ ರಾಜ್ಯದ ಮುಖ್ಯಮಂತ್ರಿಗಳ ಸಭೆಯಲ್ಲಿ ಕಾನೂನಾತ್ಮಕವಾಗಿ, ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ರಾಜ್ಯದ ನಿಲುವು ಮನವರಿಕೆ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪುನರ್ ವಿಂಗಡನೆಯಾಗಿ ಕಾಯ್ದೆಯಾಗಿದೆ. ಅದರ ಪಾಲನೆ ಸಂವಿಧಾನಬದ್ಧವಾಗಿ ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಮಹಾರಾಷ್ಟ್ರ ಈ ಕುರಿತು ಸುಪ್ರೀಂ ಕೋರ್ಟ್ ಗೆ ಹೋಗಿದೆ.  ರಾಜ್ಯ ಸರಕಾರವು ಕಾನೂನಾತ್ಮಕವಾಗಿ ಸಮರ್ಥವಾಗಿ ತನ್ನ ನಿಲುವು ಮಂಡಿಸಲಿದೆ. ವಿಷಯ ಕೋರ್ಟ್ ನಲ್ಲಿರುವುದರಿಂದ ಹೆಚ್ಚಿನ ವ್ಯಾಖ್ಯಾನ ಮಾಡಲ್ಲ ಎಂದರು.

ಇದನ್ನೂಓದಿ: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ : 1 ರನ್ ಗೆ ಔಟಾಗಿ ಟ್ರೋಲ್ ಆದ ಕೊಹ್ಲಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಕರೆದಿರುವ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯದ ಸ್ಪಷ್ಟ ನಿಲುವು ಏನೆಂಬುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.

ಮಹಾದಾಯಿ ಕಾಮಗಾರಿ ಆರಂಭಿಸಿದ್ದೆ ನಾವು:

Advertisement

ಮಹಾದಾಯಿಗೆ ತಡೆಗೋಡೆ ಕಟ್ಡಿರುವುದೇ ಕಾಂಗ್ರೆಸ್ ಸಾಧನೆ. ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಹಾದಾಯಿ ನದಿ ನೀರು ರಾಜ್ಯಕ್ಕೆ ತರಲು ಐದೂವರೆ ಕಿ.ಮೀ. ಕೆನಾಲ್ ನಿರ್ಮಾಣ ಮಾಡಿದ್ದು. ನಾನು ರಕ್ತದಲ್ಲಿ ಪತ್ರ ಬರೆದಿದ್ದರಿಂದಲೇ ಮಹಾದಾಯಿ ನದಿ ನೀರು ತರಲು ಕಾಲುವೆ ನಿರ್ಮಾಣ ಮಾಡಿದ್ದು ಎಂದರು.

ಮಹಾದಾಯಿ ಸಮಾವೇಶ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕ ಹಕ್ಕಿದೆ? ಸೋನಿಯಾ ಗಾಂಧಿ ಅವರು ಹಿಂದೆ ಗೋವಾದಲ್ಲಿ ಮಹಾದಾಯಿ ನದಿಯ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡಲ್ಲ ಎಂದು ಘೋಷಿಸಿದ್ದರು. ಈಗ ಅವರಿಗೆ ಅದರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಈ ಕುರಿತು ಚರ್ಚೆಗೆ ಅವರು ಬರಲಿ ಎಂದು ಅವರು ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next