Advertisement
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕ ತ್ವದ ಹಾದಿ ಆರಂಭವಾದದ್ದು ಗುಜರಾತಿನಿಂದ. ಗುಜರಾತ್ ಮುಖ್ಯಮಂತ್ರಿಯಾದಾಗ ನರೇಂದ್ರ ಮೋದಿ ಅವರು ಅನೇಕ ಕಟು ಟೀಕೆಗಳನ್ನು ಎದುರಿಸಿ ಸಮರ್ಥ ನಾಯಕತ್ವ ಬೆಳೆಸಿಕೊಂಡರು. ಇಡೀ ದೇಶದಲ್ಲಿಯೇ ಗುಜರಾತನ್ನು ಅಭಿವೃದ್ದಿಗೆ ಮಾದರಿ ರಾಜ್ಯ ಆಗುವಂತೆ ಮಾಡಿದರು.
Related Articles
Advertisement
ದೇಶ ಅಭಿವೃದ್ದಿಯತ್ತ ಸಾಗಬೇಕಾದರೆ ಉತ್ಪಾದನ ವಲಯ ಹೆಚ್ಚು ಗಟ್ಟಿಯಾಗಬೇಕು. ಇದನ್ನು ಮನಗಂಡ ಪ್ರಧಾನಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಭಾರತ ಆತ್ಮ ನಿರ್ಭರತೆಯಿಂದ ಎಲ್ಲ ವಲಯಗಳಲ್ಲಿ ಇಂದು ಮುನ್ನುಗ್ಗುತ್ತಿದೆ. ಆಮದು ಪ್ರಮಾಣ ಕಡಿಮೆ ಆಗಿದೆ. ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಇದರಿಂದಾಗಿ ಉದೋಗ ಸೃಷ್ಟಿಯು ಹೆಚ್ಚುತ್ತಿದೆ. ಪ್ರಧಾನಿ ಅವರ ನಾಯಕತ್ವ, ಆಲೋಚನೆಗಳು ಹಾಗೂ ಅವರ ಯೋಜನೆಗಳು ಮುಂದಿನ ಪೀಳಿಗೆ ಇಂದು ಭದ್ರವಾದ ಬುನಾದಿ ಹಾಕಿವೆ. ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಲು ಪ್ರಧಾನಿ ಹೆಚ್ಚು ಗಮನಹರಿಸಿದ್ದಾರೆ.
ದೇಶದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಬೇಕು. ಈ ಉದ್ದೇಶದಿಂದ ಜನ್ ಧನ್ ಯೋಜನೆ ಜಾರಿ ಮಾಡಿದರು. ಸರಕಾರ ಯೋಜನೆಗಳು ನೇರವಾಗಿ ಪಲಾನುಭವಿಗಳಿಗೆ ತಲುಪಬೇಕು. ನೇರ ನಗದು ಯೋಜನೆಯ ಹಣ ಯಾವುದೇ ರೀತಿಯ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಬೇಕು ಎಂಬುದು ಈ ಜನಧನ್ ಯೋಜನೆಯ ಉದ್ದೇಶ. ಇದುವರೆಗೆ ದೇಶದಲ್ಲಿ 40 ಕೋಟಿ ಗಿಂತಲೂ ಹೆಚ್ಚು ಜನ ಖಾತೆ ತೆರೆದಿದ್ದಾರೆ.
ಕೌಶಲ ಭಾರತ, ಸ್ಮಾರ್ಟ್ ಇಂಡಿಯಾ, ಆಯುಷ್ಮಾನ್ ಭಾರತ, ರೈತ ಸಮ್ಮಾನ್ ಯೋಜನೆ, ಉಜ್ವಲ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಭಾರತಕ್ಕೆ ನೀಡಿದ್ದಾರೆ. ಆಯು ಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಇಂದು 50 ಕೋಟಿಗೂ ಹೆಚ್ಚು ಜನ ಆರೋಗ್ಯ ಸೇವೆಯನ್ನು ಪಡೆದು ಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ಯೊಬ್ಬರು ತಮ್ಮದೇ ಆದ ಸೂರನ್ನು ಪಡೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಪರಿಚಯಿಸಿದ್ದಾರೆ.
ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಂದರು ಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಆ ಮೂಲಕ ದೇಶದ ಸಾರಿಗೆ ವ್ಯವಸ್ಥೆ ಉತ್ತಮ ಗೊಂಡಿದೆ. ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ದೇಶದಲ್ಲಿ ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ ಮತ್ತು ಅಕ್ಷರ ಯೋಜನೆಗಳು ಜನರಿಗೆ ತಲುಪಬೇಕು ಎಂಬುದು ಪ್ರಧಾನಿ ಯವರ ಬಯಕೆ.
ನಮ್ಮೆಲ್ಲರಿಗೂ ಸ್ಫೂರ್ತಿ :
ಮೋದಿಯವರ ಬದ್ದತೆ, ದಕ್ಷತೆ ಸದಾ ಕಾಲ ನಮ್ಮನ್ನು ಕಾರ್ಯೋನ್ಮುಖರಾಗುವಂತೆ ಮಾಡುವಲ್ಲಿ ಅವರ ಹುಟ್ಟು ಹಬ್ಬ ನಮಗೆಲ್ಲ ಪ್ರೇರಣೆಯಾಗಿದೆ. ಭವ್ಯ ಭಾರತ, ಬಲಿಷ್ಟ ಭಾರತ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರುತ್ತಿರುವ ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.
–ಬಸವರಾಜ ಬೊಮ್ಮಾಯಿ,ಮುಖ್ಯಮಂತ್ರಿ