Advertisement

CM Bommai Vs DK Shivakumar: ಹೊರಗಡೆ ಶೂರತ್ವದ ಮಾತು.. ಒಳಗಡೆ ಬೇರೆಯೇ ಹಕೀಕತ್ತು

11:25 AM Apr 07, 2023 | keerthan |

ಶಿವಮೊಗ್ಗ: ಕಾಂಗ್ರೆಸ್ ಪಕ್ಷದಲ್ಲಿ ನನಗೆ ತಿಳಿದ ಹಾಗೇ 60 ಕ್ಷೇತ್ರಗಳಿಗೆ ಸರಿಯಾದ ಅಭ್ಯರ್ಥಿಗಳಿಲ್ಲ. ಹೀಗಾಗಿ ಬಹಳಷ್ಟು ಜನರನ್ನು ಅಲ್ಲಿಂದ ಇಲ್ಲಿಂದ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಸಲುವಾಗಿ ಕಾಯ್ದಿರಿಸಿದ್ದೇವೆ ಬರುತ್ತೀರಾ ಎಂದು ಡಿ.ಕೆ ಶಿವಕುಮಾರ್ ಬಹುತೇಕ ನಮ್ಮೆಲ್ಲಾ ಶಾಸಕರಿಗೂ ಕೇಳಿದ್ದರು. ಆ ಮಟ್ಟಕ್ಕೆ ಕಾಂಗ್ರೆಸ್ ಇದೆ. ಹೊರಗಡೆ ಬಹಳ ದೊಡ್ಡ ಶೂರತ್ವದ ಮಾತನಾಡುತ್ತಾರೆ, ಒಳಗಡೆ ಹಕೀಕತ್ತು ಇರುವುದೇ ಬೇರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತ ಹೀನಾಯವಾಗಿ ಕಾಂಗ್ರೆಸ್ ಸೋಲುತ್ತದೆ. ಅವರಿಗೆ ಕ್ಯಾಂಡಿಡೇಟ್, ಬೇಸ್, ಸ್ಷಷ್ಟವಾದ ನೀತಿಯೂ ಇಲ್ಲ. ಮೀಸಲಾತಿ, ಅಭಿವೃದ್ಧಿ ಯಾವುದು ಇಲ್ಲ. ಕೇವಲ ಉಢಾಫೆ ಮಾತನಾಡಿ, ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅದು ಸಾಧ್ಯವಿಲ್ಲ ಎಂದರು.

ಬಿಜೆಪಿಯಲ್ಲಿ ಟಿಕೆಟ್ ಗಾಗಿ ಹೆಚ್ಚು ಪೈಪೋಟಿ ವಿಚಾರ‌ವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೈಪೋಟಿ ಜಾಸ್ತಿಯಿದ್ದಾಗ ಆಕಾಂಕ್ಷಿಗಳು ಸಹಜವಾಗಿ ಜಾಸ್ತಿ ಇರ್ತಾರೆ. 8 -9 ರಂದು ಸಭೆ ಸೇರುತ್ತಿದ್ದೇವೆ. ನಂತರ ಪಟ್ಟಿಯನ್ನು ಬಿಡುಗಡೆ ಮಾಡ್ತೇವೆ. ಬಹಳ ವ್ಯವಸ್ಥಿತವಾಗಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗುತ್ತಿದೆ ಎಂದರು‌.

ಕೆಳ ಹಂತದ ಕಾರ್ಯಕರ್ತರು, ಪದಾಧಿಕಾರಿಗಳು, ಜನರ ಭಾವನೆ ಆಧರಿಸಿ ಆಗುತ್ತಿದೆ. ನಾಲ್ಕು ದಿನ ಕುಳಿತು ಸುದೀರ್ಘ ಚರ್ಚೆ ಮಾಡಿ, ಕ್ಷೇತ್ರಕ್ಕೆ 3-4 ಹೆಸರು ಕಳುಹಿಸಲಾಗಿದೆ. ದೆಹಲಿ ಸಭೆಯಲ್ಲಿ ಚರ್ಚಿಸಿ, ಅಂತಿಮ ಪಟ್ಟಿ ಫೈನಲ್ ಅಗಿ ಬಿಡುಗಡೆಯಾಗುತ್ತದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ:Suyash Sharma: ಆರ್ ಸಿಬಿ ಬ್ಯಾಟರ್ ಗಳನ್ನು ಕಾಡಿದ ನೀಲಕೇಶದ ಚೆಲುವ ಯಾರು?

Advertisement

ಹಾಸನ ಜೆಡಿಎಸ್ ಗೊಂದಲ ವಿಚಾರಕ್ಕೆ ಮಾತನಾಡಿ, ಅದು ಅವರ ಆಂತರಿಕ ವಿಚಾರ. ನಾನು ಜಾಸ್ತಿ ವ್ಯಾಖ್ಯಾನ ಮಾಡಲ್ಲ. ಕುಟುಂಬದೊಳಗಿದೆ, ರಾಜಕೀಯವಾಗಿ ಇದ್ದರೆ ಮಾತನಾಡಬಹುದು ಎಂದರು.

ಮಹೇಶ್ ಕುಮಟಳ್ಳಿ ಸೋಲನ್ನು ನನ್ನ ತಲೆ ಮೇಲೆ ಹಾಕಲು ಯತ್ನ ಎಂಬ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,  ನಾನು ಅವರ ಜೊತೆ ಮಾತನಾಡಿದ್ದೇನೆ. ಪಕ್ಷದ ಹಿರಿಯ ನಾಯಕರು ಅವರು, ಡಿಸಿಎಂ ಅಗಿದ್ದವರು. ಅವರ ಜವಾಬ್ದಾರಿ ಅರಿವಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ನಾನು ಮಾತನಾಡಿದ್ದೇನೆ. ಎಲ್ಲವೂ ಸರಿಯಾಗುತ್ತದೆ ಎಂದರು.

ಸುದೀಪ್ ಬೆಂಬಲಕ್ಕೆ ಟೀಕೆ ವಿಚಾರವಾಗಿ ಮಾತನಾಡಿ, ನಾನೇನು ಮಾಡ್ಲಪ್ಪ. ಯಾರು ಬೇಕಾದರೂ ಪ್ರಚಾರಕ್ಕೆ ಕರೆಯಲಿ. ಹೋಗುವುದು, ಬಿಡುವುದು ಅವರ ಇಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next