ಬೆಂಗಳೂರು: ಭ್ರಷ್ಟಾಚಾರದ ಗಂಗ್ರೋತ್ರಿ ಅಂದರೆ ಅದು ಕಾಂಗ್ರೆಸ್. ಕಾಂಗ್ರೆಸ್ ನ ಅಧ್ಯಕ್ಷರು,ಹಿಂದಿನ ಅಧ್ಯಕ್ಷರು ಭ್ರಷ್ಟಾಚಾರ ಆರೋಪದಡಿ ದಿನಾ ವಿಚಾರಣೆಗೆ ಅಟೆಂಡ್ ಆಗುತ್ತಿದ್ದಾರೆ. ಇಲ್ಲಿನ ಅಧ್ಯಕ್ಷರು ಸಹ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಜನ ಅವರನ್ನು ಯಾವ ಸ್ಥಾನದಲ್ಲಿಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಆದರೆ ಅವರು ಇನ್ನೂ ಪಾಠ ಕಲಿತಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಕಾಂಗ್ರೆಸ್ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ವಿಚಾರಕ್ಕೆ ಪ್ರತಿಕ್ರಿತೆ ನೀಡಿದ ಅವರು, ಯಾವುದಾದರೂ ಒಂದು ವಿಶಿಷ್ಟ ಪ್ರಕರಣದಬಗ್ಗೆ ವಿವರ ಕೊಟ್ಟರೆ ಮುಕ್ತವಾದ ತೆನಿಖೆ ಮಾಡಲು ಸಿದ್ದ. ಸುಮ್ಮನೆ ಹಿಟ್ ಅಂಡ್ ರನ್ ಮಾಡುವುದಲ್ಲ. ಸಾಕಷ್ಟು ಭ್ರಷ್ಟಾಚಾರ ಅವರ ಕಾಲದಲ್ಲಿ ಆಗಿದೆ ಬರುವಂತ ಅದು ದಿನಗಳಲ್ಲಿ ತಿಳಿಯಲಿದೆ. ನಮಗೆ ಜನ ಸರ್ಟಿಫಿಕೇಟ್ ಕೊಡುತ್ತಾರೆ. ಕಾಂಗ್ರೆಸ್ ನಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ ಬೇಕಿಲ್ಲ ಎಂದರು.
ಅವರು ಸಿದ್ದರಾಮೋತ್ಸವ ಜಯಂತಿ ಮಾಡುತ್ತಿದ್ದಾರೆ. ಅದು ವ್ಯಕ್ತಿಯ ಪೂಜೆ. ನಾವು ಜನರ ಉತ್ಸವ ಮಾಡುತ್ತಿದ್ದೇವೆ ಎಂದರು.
ನಾಳೆ ವಿಶೇಷ ಯೋಜನೆ ಪ್ರಕಟಿಸುವ ವಿಚಾರದ ಬಗ್ಗೆ ಸಿಎಂ ಬಿಟ್ಟು ಕೊಡದೆ ಕಾದು ನೋಡಿ ಎಂದರು.