Advertisement

ಬಾಂಗ್ಲಾ ವಿಮೋಚನಾ ಯುದ್ಧದ ಸುವರ್ಣ ಸಂಭ್ರಮ: ಗಣ್ಯರ ಸ್ಮರಣೆ

10:48 AM Dec 16, 2021 | Team Udayavani |

ಬೆಂಗಳೂರು: 1971ರ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯೋತ್ಸವಕ್ಕೆ ಇಂದು 50 ವರ್ಷದ ಸಂಭ್ರಮ. ಈ ನಿಟ್ಟಿನಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಣ್ಯರು ಈ ಮಹೋನ್ನತದ ದಿನದ ಸ್ಮರಣೆ ಮಾಡಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಣೆ ಮಾಡಿದ್ದು, “ವಿಜಯ್ ದಿವಸ್, ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿದ ಐತಿಹಾಸಿಕ ದಿನವಾಗಿದೆ. ದೇಶಕ್ಕಾಗಿ ಹೋರಾಡಿದ ನಮ್ಮ ಧೀರ ಹೃದಯಗಳಿಗೆ ನಾನು ವಂದಿಸುತ್ತೇನೆ. ಬನ್ನಿ ಈ #SwarnimVijayVarsh ದಂದು ನಮ್ಮ ಧೀರರನ್ನು ಸ್ಮರಿಸೋಣ ಎಂದು ಕೂ ಮಾಡಿದ್ದಾರೆ.

Koo App

”Vijay Diwas is a historic day when India decisively defeated Pakistan in 1971 war, which led to the liberation of Bangladesh. I salute our brave hearts who fought for the Nation. Let’s commemorate our heroes on this #SwarnimVijayVarsh” : Chief Minister @bsbommai. #AmritMahotsav #VijayDiwas2021

CM of Karnataka (@CMOKarnataka) 16 Dec 2021

Advertisement

ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ನೀಡಿ ಅಲ್ಲಿನ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿದ #VijayDiwas ರಂದು ಭಾರತೀಯ ಯೋಧರ ಶೌರ್ಯ, ತ್ಯಾಗ, ಸಮರ್ಪಣೆಗೆ ಗೌರವದ ಪ್ರಣಾಮಗಳನ್ನು ಸಲ್ಲಿಸೋಣ. ಪಾಕಿಸ್ತಾನಕ್ಕೆ ಪಾಠ ಕಲಿಸಿ ಭಾರತದ ಶಕ್ತಿ ತೋರಿದ ಯೋಧರ ಸಾಹಸ, ರಾಷ್ಟ್ರಪ್ರೇಮ ಸ್ಮರಣಾರ್ಹವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇದನ್ನೂ ಓದಿ:ಭಾರತ ಸೇನೆಯ ವಿಜಯಗಾಥೆ ಸರಣಿ: ಪಾಕ್‌ ಸೈನಿಕರ ಹೆಣಗಳ ರಾಶಿ ಮೇಲೆ ನಡೆದಿದ್ದೆವು!

ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಶ್ತೀಮತಿ ಇಂದಿರಾ ಗಾಂಧಿ ಅವರ ದಿಟ್ಟ, ಚಾಣಾಕ್ಷ ನಿರ್ಧಾರಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದು, ಪೂರ್ವ ಪಾಕಿಸ್ತಾನವನ್ನು ಅದರ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸಿ ’ಬಾಂಗ್ಲಾದೇಶ’ಉದಯಕ್ಕೆ ಕಾರಣವಾದ, ಐತಿಹಾಸಿಕ ’ವಿಜಯ ದಿನ’ ದಂದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ, ಬಲಿದಾನವನ್ನು ಸ್ಮರಿಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಕೂ ಮಾಡಿದೆ.

Koo App

ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಶ್ತೀಮತಿ ಇಂದಿರಾ ಗಾಂಧಿ ಅವರ ದಿಟ್ಟ, ಚಾಣಾಕ್ಷ ನಿರ್ಧಾರಗಳಿಂದ ಪಾಕಿಸ್ತಾನವನ್ನು ಬಗ್ಗು ಬಡಿದು, ಪೂರ್ವ ಪಾಕಿಸ್ತಾನವನ್ನು ಅದರ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸಿ ’ಬಾಂಗ್ಲಾದೇಶ’ ಉದಯಕ್ಕೆ ಕಾರಣವಾದ, ಐತಿಹಾಸಿಕ ’ವಿಜಯ ದಿನ’ದಂದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ, ಬಲಿದಾನವನ್ನು ಸ್ಮರಿಸುತ್ತೇವೆ.

ಕರ್ನಾಟಕ ಕಾಂಗ್ರೆಸ್ (@inckarnataka) 16 Dec 2021

“ನೀವು ಶರಣಾಗಿ ಅಥವಾ ನಾವು ನಿಮ್ಮನ್ನು ಅಳಿಸಿ ಹಾಕುತ್ತೇವೆ”- ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ 13ನೇ ಡಿಸೆಂಬರ್ 1971 ರಂದು ಪಾಕಿಸ್ತಾನಕ್ಕೆ ಹೇಳಿದ ಮಾತು. ಬಾಂಗ್ಲಾದೇಶದ ವಿಮೋಚನೆ ಯುದ್ಧದ ಸಂದರ್ಭದಲ್ಲಿ ವೀರ ಸೇನಾಧಿಕಾರಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ದಿಟ್ಟ ನಾಯಕತ್ವದ ಪರಿಣಾಮ, 93,000 ಪಾಕ್ ಸೈನಿಕರು ಭಾರತಕ್ಕೆ ಶರಣಾಗಿದ್ದರು ಎಂದು ಸಚಿವ ಕೆ. ಸುಧಾಕರ್ ಸ್ಮರಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next