Advertisement

ಬಹಳ ಶುದ್ಧ ಹಸ್ತದವರು ಯಾತ್ರೆಗೆ ಹೊರಟಿದ್ದಾರೆ: ಕಾಂಗ್ರೆಸ್ ಪ್ರವಾಸಕ್ಕೆ ಸಿಎಂ ವ್ಯಂಗ್ಯ

10:45 AM Apr 16, 2022 | Team Udayavani |

ಬೆಂಗಳೂರು: ಬಹಳ ಶುದ್ಧ ಹಸ್ತದವರು ಯಾತ್ರೆಗೆ ಹೊರಟಿದ್ದಾರೆ. ಪ್ರವಾಸ ಮಾಡಲಿ, ಆ ಪ್ರಶ್ನೆಯಿಲ್ಲ. ಬಹಳ ಶುದ್ಧ ಹಸ್ತದವರು ಪವಿತ್ರ ಹಸ್ತದವರು ಕಮಿಷನ್ ಬಗ್ಗೆ ಮಾತಾಡುತ್ತಾರೆ. ಈಗಾಗಲೇ ಜನಕ್ಕೆ ಗೊತ್ತಾಗಿದೆ. ಅವರ ಬೀರುನಲ್ಲಿ ಎಷ್ಟೊಂದು ಭ್ರಷ್ಟಾಚಾರದ ಅಸ್ಥಿಪಂಜರ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

Advertisement

ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಈಗ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ. ಈಗ ಪೋಸ್ಟ್ ಮಾರ್ಟಮ್ ಆಗಿದೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ವಿಚಾರ ಗೊತ್ತಾಗಲಿದೆ ಎಂದರು.

ಗಣಪತಿ ವಿಚಾರದಲ್ಲಿ ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ ಎಫ್ಐಆರ್ ಆಗಿರಲಿಲ್ಲ. ಆ ಪ್ರಕರಣವನ್ನೂ ಮುಚ್ಚಿ ಹಾಕುವ ಪ್ರಯತ್ನ ಆಗಿರಲಿಲ್ಲವೇ? ಕೋರ್ಟ್ ನಿಂದ ಆದೇಶ ಬಂದ್ ಮೇಲೆ ಎಫ್ಐಆರ್ ಆಗಿತ್ತು. ಅವರ ಮನೆಯವರು ಕೋರ್ಟ್‌ ಗೆ ಹೋಗಬೇಕಾಗ ಪರಿಸ್ಥಿತಿ ಬಂದಿತ್ತು. ಆದರೆ ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತದೆ ಅದರ ಆಧಾರದ ಮೇಲೆ ಮುಂದಿನ ಸೆಕ್ಷನ್ ಹಾಕುತ್ತೇವೆ ಎಂದರು.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಭೇಟಿಯಾದ ರಮೇಶ್ ಜಾರಕಿಹೊಳಿ: ಕುತೂಹಲ ಮೂಡಿಸಿದ ಸಾಹುಕಾರ್ ನಡೆ!

ಕಾಂಗ್ರೆಸ್ ಅವರು ಅವರೇ ಲಾಯರ್ ಆಗಬೇಕು, ಅವರೇ ಜಡ್ಜ್ ಆಗಬೇಕು ಎನ್ನುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ. ನೀವು ಏನೆಲ್ಲಾ ಮುಚ್ಚಿ ಹಾಕಿದ್ದೀರಿ ಎಂದು ಜನಕ್ಕೆ ಗೊತ್ತು. ಯಾವಾಗ ಯಾವ ಸೆಕ್ಷನ್ ಆಗಬೇಕೆಂದು ಕಾನೂನು ಪ್ರಕಾರ ಆಗುತ್ತದೆ. ನಾವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

Advertisement

ಸಂತೋಷ್ ಆತ್ಮಹತ್ಯೆ ಪ್ರಕರಣ ಸಿಐಡಿಗೆ ವಹಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ‌, ಪ್ಪ್ರಕರಣ ಪ್ರಾಥಮಿಕ ತನಿಖೆ ಹಂತದಲ್ಲಿದೆ. ಪ್ರಾಥಮಿಕ ತನಿಖೆಯಾಗಲಿ. ಸಿಐಡಿ ತನಿಖೆಯ ಅವಶ್ಯಕತೆಯ ಬಗ್ಗೆ ಚರ್ಚಿಸಿ ನಂತರ ನಿರ್ಧರಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next