Advertisement

ಕಿತ್ತೂರು ಉತ್ಸವ ಮಾಡುವ ಭಾಗ್ಯ ದೊರೆತಿರುವುದು ಪುಣ್ಯದ ಕಾರ್ಯ: ಸಿಎಂ ಬೊಮ್ಮಾಯಿ

01:36 PM Oct 23, 2021 | Team Udayavani |

ಹುಬ್ಬಳ್ಳಿ: ರಾಣಿ ಚನ್ನಮ್ಮಳ ನಗರದಲ್ಲಿ ಮೂರ್ತಿ ಮಾಡಬೇಕಾದರೆ ಅದು ದೊಡ್ಡ ಹೋರಾಟವಾಗಿತು. ನಮ್ಮ ತಂದೆಯವರು ಉಸ್ತುವಾರಿ ಸಚಿವರಿದ್ದಾಗ ಎರಡು ವರ್ಷದ ಸುದೀರ್ಘ ಹೋರಾಟದ ಫಲವಾಗಿ ಈ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಈಗ ಕಿತ್ತೂರು ಉತ್ಸವ ಮಾಡುವ ಭಾಗ್ಯ ನನ್ನ ಪಾಲಿಗೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಶನಿವಾರ ಕಿತ್ತೂರ ರಾಣಿ ಚನ್ನಮ್ಮಳ ಜಯಂತಿ ಅಂಗವಾಗಿ ಇಲ್ಲಿಯ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿದ ರಾಣಿ ಚನ್ನಮ್ಮ ಮೂರ್ತಿಯನ್ನು ನಗರದಲ್ಲಿ ಸ್ಥಾಪನೆ ಮಾಡಲು ಸಾಕಷ್ಟು ಹೋರಾಟಗಳು ನಡೆದವು. ಆದರೆ ಅದು ಕೆಲ ವರ್ಷಗಳಲ್ಲೇ ಈಡೇರಿತು. ಇದೀಗ ವೀರ ವನಿತೆಯ ಉತ್ಸವ ಮಾಡುವ ಭಾಗ್ಯ ನನಗೆ ದೊರೆತಿರುವುದು ಪುಣ್ಯದ ಕಾರ್ಯ ಎಂದರು.

ಇದನ್ನೂ ಓದಿ:ಯಾವುದೇ ಪಕ್ಷದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ: ಎಚ್ ಡಿ ಕುಮಾರಸ್ವಾಮಿ

2011ರಲ್ಲಿ ನಾನು ಉಸ್ತುವಾರಿ ಸಚಿವನಿದ್ದಾಗ ಕಿತ್ತೂರ ಪ್ರಾಧಿಕಾರ ಮಾಡಿ ಅಂದು ಎಂಟು ಕೋಟಿ ರೂ. ಬಿಡುಗಡೆಗೊಳಿಸಿ ಆ ಕೆಲಸ ಪ್ರಾರಂಭಿಸಲಾಗಿತ್ತು. ಈ ವರ್ಷ 50 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಡಲಾಗಿದೆ. ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಎಲ್ಲ ಸೂತ್ರಗಳನ್ನು ಬಿಜೆಪಿ ಸರ್ಕಾರ ಈಡೇರಿಸುತ್ತದೆ ಎಂದು ಹೇಳಿದರು.

ಬೃಹತ್ ಕೈಗಾರಿಕೆ ಸಚಿವ ಮುರಗೇಶ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಜುಗೌಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next