Advertisement

Kollur mookambika ದೇವಳದಲ್ಲಿ ರಿಷಬ್ – ಬೊಮ್ಮಾಯಿ ಮಾತುಕತೆ: ಮತ್ತೋರ್ವ ಸ್ಟಾರ್ ಪ್ರಚಾರಕ?

01:08 PM Apr 13, 2023 | Team Udayavani |

ಕುಂದಾಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಭೇಟಿ ನೀಡಿ, ದೇವಿ ದರ್ಶನ ಪಡೆದರು. ಈ ವೇಳೆ ಖ್ಯಾತ ನಟ- ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಜತೆಗೆ ಕಾಣಿಸಿಕೊಂಡಿದ್ದು, ಹಲವರ ಹುಬ್ಬೇರಿಸುವಂತೆ ಮಾಡಿದೆ.

Advertisement

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ಜತೆ ಹಲವು ಬಿಜೆಪಿ ನಾಯಕರೂ ಇದ್ದರು. ಆದರೆ ಇದೇ ವೇಳೆ ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ಕೂಡಾ ದೇವಸ್ಥಾನದಲ್ಲಿದ್ದರು. ಸಿಎಂ ಬೊಮ್ಮಾಯಿ ಮತ್ತು ರಿಷಬ್ ಭೇಟಿಯಾಗಿ ಮಾತುಕತೆ ನಡೆಸಿದರು.

ಬೊಮ್ಮಾಯಿ- ರಿಷಬ್ ಭೇಟಿ ಹಲವು ಗುಸುಗುಸುಗಳಿಗೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ನಟ ಕಿಚ್ಚ ಸುದೀಪ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಿದ್ದ ಬಿಜೆಪಿ ಇದೀಗ ಕರಾವಳಿ ಭಾಗದ ಮತ ಸೆಳೆಯಲು ರಿಷಬ್ ಮೊರೆಹೋಗಿದೆಯೇ ಎಂಬ ಮಾತುಗಳು ಕೇಳಿಬಂದಿದೆ. ಇತ್ತೀಚೆಗಷ್ಟೇ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಅವರು ಕಮಲ ಪಾಳಯದ ಬೆಂಬಲಕ್ಕೆ ನಿಂತರೆ ಕರಾವಳಿ ಸೇರಿ ಹಲವು ಕಡೆ ಪಕ್ಷಕ್ಕೆ ಬೆಂಬಲವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ:ಅರಂತೋಡು: ಕೆರೆಗೆ ಬಿದ್ದ ನಾಲ್ಕು ಕಾಡನೆಗಳು ಕಾಡಿನತ್ತ; ಕಾರ್ಯಯೋಜನೆ ಯಶಸ್ವಿ !

ಆದರೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅವರು ನಮ್ಮ ಸಿದ್ದಾಂತ ಹತ್ತಿರವಿದ್ದವರು. ನಮ್ಮ ಸಿದ್ದಾಂತ ಪ್ರತಿಪ್ರಾದನೆ ಮಾಡಿದವರು ರಿಷಬ್. ಆದರೆ ಅವರಲ್ಲಿ ಯಾವುದೇ ಕ್ಯಾಂಪೇನ್ ವಿಚಾರ ಮಾತನಾಡಿಲ್ಲ. ಅವರು ಮೊದಲಿಂದಲೂ ಒಳ್ಳೆಯ ಸ್ನೇಹಿತರು. ಅವರು ದೇವಸ್ಥಾನಕ್ಕೆ ಬರುವುದು ನನಗೆ ಗೊತ್ತೇ ಇರಲಿಲ್ಲ. ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಯೋಚನೆಯಿಲ್ಲ ಎಂದರು.

Advertisement

ಕೊಲ್ಲೂರು ದೇವಿಯಲ್ಲಿ ಕನ್ನಡ ಜನರ ಸುಭೀಕ್ಷೆಗೆ ಬೇಡಿಕೊಂಡೆ. ನವ ನಾಡು ಜನರಿಗೆ ಒಳ್ಳೆಯದಾಗಲಿಯೆಂದು ಬೇಡಿಕೊಂಡೆ ಎಂದರು.

ಉಡುಪಿಯಲ್ಲಿ ಹೊಸ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಯೋಗ ಆಲ್ಲ, ರಿಸ್ಕ್ ಅಲ್ಲ. ಈಗ ಇರುವವರು ಪ್ರಬಲ ಸಂಘಟನೆಯಿಂದ ಬಂದವರು. ಸಂಘಟನೆಯಲ್ಲಿ ಪ್ರಬಲ ಅತ್ಯಂತ ಗಟ್ಟಿ ಇರುವವರನ್ನು ಆಯ್ಕೆ ಮಾಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next