Advertisement
ಸಭೆಯ ಬಳಿಕ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದ್ದು, ವಾರಾಂತ್ಯ ಕರ್ಫ್ಯೂ ಅಂತ್ಯವಾಗುತ್ತದೋ ಅಥವಾ ಕೆಲವೆಡೆ ಮಾತ್ರ ಇರುತ್ತದೋ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ವಾರಾಂತ್ಯ ಕರ್ಫ್ಯೂ ತೆರವುಗೊಳಿಸಬೇಕು ಎಂದು ಆಡಳಿತಾರೂಢ ಬಿಜೆಪಿಯಲ್ಲೇ ಒತ್ತಡ ಇದೆ. ಜತೆಗೆ ಹೊಟೇಲ್, ಕೈಗಾರಿಕೆ ಸೇರಿ ಹಲವು ಉದ್ಯಮಗಳೂ ಇದೇ ಆಗ್ರಹ ಮುಂದಿಟ್ಟಿವೆ.
Related Articles
Advertisement
ಈ ಮೊದಲು ಜ.25ರ ಬಳಿಕ ರಾಜ್ಯದಲ್ಲಿ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅಂದಾಜಿಸ ಲಾಗಿತ್ತು. ಆದರೆ, ಕಳೆದ 2-3 ದಿನಗಳ ಅಂಕಿ-ಸಂಖ್ಯೆ ನೋಡಿದರೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದವರೆಗೂ ಹೆಚ್ಚು ಪ್ರಕರಣಗಳು ದಾಖಲಾಗುವ ಅಂದಾಜಿದೆ.
ಇತ್ತೀಚೆಗೆ ಮುಖ್ಯಮಂತ್ರಿಯವರು ರಾಜ್ಯದ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜತೆ ನಡೆಸಿದ ವೀಡಿಯೋ ಸಂವಾದದಲ್ಲಿ ಹಲವಾರು ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾವಾರು ಪರಿಸ್ಥಿತಿಯ ಅಂಕಿ-ಅಂಶ ಪಡೆಯಲಾಗಿದೆ. ಜತೆಗೆ, ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿಯನ್ನೂ ಪಡೆದಿದ್ದಾರೆ. ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಿ ತಜ್ಞರ ಸಲಹೆ ಮೇರೆಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಸಾಧ್ಯತೆಗಳೇನು? :
- ವಾರಾಂತ್ಯ ಕರ್ಫ್ಯೂ ವಾಪಸ್,
- ರಾತ್ರಿ ಕರ್ಫ್ಯೂ 11ರಿಂದ ಬೆಳಗ್ಗೆ 5
- ಬೆಂಗಳೂರು ಸೇರಿ ಪ್ರಕರಣ ಹೆಚ್ಚಾಗಿರುವ ಕಡೆ ವಾರಾಂತ್ಯ ಕರ್ಫ್ಯೂ ಒಂದು ಅಥವಾ ಎರಡು ವಾರ ಮುಂದುವರಿಕೆ
- ಕಡಿಮೆ ಪ್ರಕರಣ ಇರುವ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ವಾಪಸ್, ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ
- ಮಾರುಕಟ್ಟೆ, ಮಾಲ್, ಸಿನೆಮಾ ಮಂದಿರ, ಪಾರ್ಕ್ ಪ್ರವೇಶ ನಿರ್ಬಂಧ ಮುಂದುವರಿಕೆ