Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನು ಮಾತನಾಡುತ್ತದ್ದೇವೆ ಎಂಬ ಸಣ್ಣ ಅರಿವಿಲ್ಲದೆ ಹೇಳಿಕೆ ನಿಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯನವರು ಸುಮಾರು 50 ವರ್ಷಗಳವರೆಗೆ ಸಾರ್ವಜನಿಕ ಜೀವನದಲ್ಲಿದ್ದವರು ಸಹ ಕೀಳುಮಟ್ಟದ ಪದಪ್ರಯೋಗಕ್ಕೆ ಮುಂದಾಗಿರುವುದು ಅವರಿಗೆ ಶೋಭೆ ತರದು.ಮೋದಿಯವರನ್ನು ಕಾಂಗ್ರೆಸ್ ನವರು ಹಿಂದೆ ಸಾವಿನ ವ್ಯಾಪಾರಿ, ಅವರ ಸಮಾಧಿ ಹುಡುಕುತ್ತೇವೆ ಎಂದಿದ್ದರು, ಇದೀಗ ವಿಷದ ಹಾವು ಎಂದಿದ್ದಾರೆ. ಮೋದಿಯವರನ್ನು ಅವರು ಕೀಳು ಶಬ್ದಗಳಲ್ಲಿ ಟೀಕಿಸಿದಾಗಲೆಲ್ಲ ಮೋದಿಯವರ ಜನಪ್ರಿಯತೆ ಹೆಚ್ಚುತ್ತಲೇ ಸಾಗಿದೆ. ಈ ಬಾರಿಯೂ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಮೀಸಲು ಹೆಚ್ಚಳ, ಒಳಮೀಸಲಾತಿ ಜಾರಿಗೆ ಮುಂದಾದ ನನ್ನ ಕ್ರಮ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಕಡೆವಾಲಿದ್ದು, ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಂಡಿದ್ದರ ನೋವು ಸಿದ್ಧರಾಮಯ್ಯ ಅವರನ್ನು ಕಾಡುತ್ತಿದೆ.ಜತಗೆ ಸಿದ್ಧರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿ ನಡೆಸಬೇಕಾಗಿದೆ.ಅವರಿಗಿಂತ ನಾನು ಮೇಲು ಎಂಬುದನ್ನು ತೋರಿಸಬೇಕಾಗಿದೆ. ಸಿದ್ಧರಾಮಯ್ಯ ವಿರುದ್ಧ 8 ಸಾವಿರ ಕೋಟಿ ರೂ.ಗಳ ಬಿಡಿಎ ಹಗರಣವಿದೆ. ವರಣಾದಲ್ಲಿ ಸೋಲಿನ ಭೀತಿಯೂ ಸಿದ್ಧರಾಮಯ್ಯನವರನ್ನು ಕಾಡುತ್ತಿದ್ದು ಅದಕ್ಕಾಗಿ ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.