Advertisement

ಕ್ಯಾ ದೇನಾ ಹೈ ಹಮೇಚ್ ದೇಂಗೇ…: ಸಿಎಂ ಬೊಮ್ಮಾಯಿ ಹೇಳಿದ್ದೇನು?

06:07 PM Dec 25, 2021 | Team Udayavani |

ವಿಜಯಪುರ : ನಾನು, ದೇತೂಂ, ದಿಲಾತೂಂ ಎನ್ನುವವನಲ್ಲ, ಬದಲಾಗಿ ಕ್ಯಾ ದೇನಾ ಹೈ ಹಮೇಚ್ ದೇಂಗೇ ಎನ್ನುವವನು. ಹೀಗಂತ ಹಿಂದಿಯಲ್ಲಿ ಜನರಿಗೆ ಭರವಸೆ ನೀಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Advertisement

ವಿಜಯಪುರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುವಾಗ, ರಾಜ್ಯದಲ್ಲಿ 14 ತಿಂಗಳಲ್ಲಿ 5 ಲಕ್ಷ ಮನೆ ನಿರ್ಮಿಸುವ ವಿಷಯ ಪ್ರಸ್ತಾಪಿಸಿದರು. ಈ ಹಂತದಲ್ಲಿ ಹಾವೇರಿ ನವಾಬರ ಪರಿಸರದ ನಮ್ಮಲ್ಲಿ ಒಂದು ಮಾತಿದೆ, ಆದಿಲ್ ಶಾಹಿ ನಾಡಿನ ನಿಮ್ಮಲ್ಲೂ ಅದೇ ರೀತಿ ಇರಬಹುದು ಎಂದು ಮೇಲಿನಂತೆ ಉಲ್ಲೇಖಿಸಿದರು.

ದೇತೂಂ ಎನ್ನುತ್ತಲೇ ಕಾಲ ಕಳೆಯುವುದು, ಮತ್ತೆ ಕೇಳಿದಾಗ ದಿಲಾತೂಂ ಎನ್ನುವುದು, ಮತ್ತೆ ಮತ್ತೆ ಕೇಳಿದಾಗ ದಿಲಾನೇ ವಾಲೋಂಕೋ ದಿಖಾವೂಂಗಾ ಎಂದು ಅನ್ಯರ ಕಡೆ ಕೈ ತೋರಿಸಿ ಪಲಾಯನ ವಾದ ಮಾಡುವುದು. ಆದರೆ ನಾನು ಮಾತ್ರ ಕ್ಯಾ ದೇನಾ ಹೈ ಓ ಹಮೇಚ್ ದೇಂಗೇ ಎಂಬ ನಿಲುವಿನವನು ಎಂದರು.

ರಾಜ್ಯದಲ್ಲಿ ಬರುವ 14 ತಿಂಗಳಲ್ಲಿ ನಗರ ಪ್ರದೇಶದಲ್ಲಿ 1 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮನೆಗಳನ್ನು ನಿರ್ಮಿಸುವ ನಮ್ಮ ಸರ್ಕಾರದ ಗುರಿ ಬದ್ಧತೆಯಿಂದ ಕೂಡಿದೆ. ವಸತಿ ಸಚಿವ ಸೋಮಣ್ಣ ಅವರಿಂದ ಇದೀಗ ಚಾಲನೆ ಪಡೆದಿರುವ 5 ಲಕ್ಷ ಮನೆ ನಿರ್ಮಿಸುವ ನಮ್ಮ ಯೋಜನೆ ನಮ್ಮ ಸರ್ಕಾರದ ಹಾಗೂ ಅವರ ಅಧಿಕಾರವಧಿಯಲ್ಲೇ ಪೂರ್ಣಗೊಳ್ಳಲಿದೆ. ಇದಕ್ಕೆ ಅಗತ್ಯ ಇರುವ ಅನುದಾನ ನೀಡಲು ನಾನು ಬದ್ಧನಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next