Advertisement
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ ಅವರುಗಳು ಕಾಂಗ್ರೆಸ್ ದೇಶ ಭಕ್ತರ ಪರವಾಗಿ ಇದೆಯೋ ಇಲ್ಲವೆ ಭಯೋತ್ಪಾದಕರ ಪರವಾಗಿದೆಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
Related Articles
Advertisement
ಸಾಕ್ಷಿ ಸಮೇತ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಕಾಂಗ್ರೆಸ್ ನವರಿಗೆ ಟೀಕೆ ಮಾಡುವುದೇ ಕಾಯಕವಾಗಿದೆ. ಈ ಮೂಲಕ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಮಾತು ನಂಬಲು ಜನ ಮೂರ್ಖರಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಗ್ವಾಲಿಯರ್: ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ; ವೈದ್ಯರ ತಂಡದಿಂದ ಪರಿಶೀಲನೆ
ಬಂಧಿತ ಉಗ್ರನಿಗೆ ಭಯೋತ್ಪಾದನೆ ಸಂಘಟನೆ ಮತ್ತು ಕೆಲ ಉಗ್ರರ ಸಂಪರ್ಕವಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓರ್ವ ಹಿರಿಯ ರಾಜಕಾರಣಿ. ಏನೇ ಮಾತನಾಡಬೇಕಾದರೂ ಮೊದಲು ವಿಷಯ ತಿಳಿದುಕೊಂಡು ಮಾತನಾಡಲಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಭಯೋತ್ಪಾದಕನ ಬಗ್ಗೆ ಅನುಕಂಪ ಬೇಡ. ಅವರ ಹೇಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಭಯೋತ್ಪಾದಕರಿಗೆ ಬೆಂಬಲ ಕೊಟ್ಟು ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆಯಬಹುದೆಂಬ ನಿಮ್ಮ ಲೆಕ್ಕಾಚಾರ ಈಡೇರುವುದಿಲ್ಲ. ಇನ್ನು ಎಷ್ಟು ದಿನ ಈ ರೀತಿ ಓಲೈಕೆ ರಾಜಕಾರಣ ಮಾಡುತ್ತೀರಿ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಮತದಾರರ ಪಟ್ಟಿ ಅಕ್ರಮವನ್ನು ಮರೆಮಾಚಲು ಕುಕ್ಕರ್ ಬಾಂಬ್ ಸೃಷ್ಟಿಸಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟ್ಟು ಕೊಟ್ಟ ಸಿಎಂ, 2017ರಲ್ಲಿ ಆ ಸಂಸ್ಥೆಗೆ ಕೊಟ್ಟವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಚಿಲುಮೆ ಸಂಸ್ಥೆಗೆ ಕೊಟ್ಟಿದ್ದು ಇದೇ ಕಾಂಗ್ರೆಸ್ ಸರ್ಕಾರ. ಅಕ್ರಮವಾಗಿ ನೀಡಿದ್ದೇ ಇವರು. ಈಗ ನಾವು ತನಿಖೆಗೆ ವಹಿಸಿದ್ದೇವೆ. ಎಲ್ಲಾ ಸತ್ಯಾಂಶವೂ ಹೊರ ಬರಲಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಸಲಾಗಿದೆ. ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳಲಿದೆ. ನಮ್ಮ ನಿಲುವು ಇದರಲ್ಲಿ ಸ್ಪಷ್ಟವಾಗಿದೆ ಎಂದರು.
ದೇಶದ ಗಡಿ ರಕ್ಷಣೆ ಮಾಡುವ ವಿಷಯದಲ್ಲಿ ಹಲವಾರು ಯುದ್ಧಗಳು ನಡೆದಾಗ ಕರ್ನಾಟಕದ ಅನೇಕ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇನ್ನು ಕೆಲವು ಯೋಧರು ಗಾಯಗೊಂಡಿದ್ದಾರೆ. ಅವರ ಪರಿಶ್ರಮದ ಫಲದಿಂದಲೇ ನಮಗೆ ಜಯ ಸಿಕ್ಕಿದೆ ಎಂದು ಯೋಧರ ಗುಣಗಾನ ಮಾಡಿದರು.
ರಕ್ಷಣಾ ಸೇವೆ ಶ್ರೇಷ್ಠವಾದ ಕಾಯಕವಾಗಿದೆ. ಬೇರೆ ಯಾವುದೇ ಸೇವೆಯೂ ಈ ರೀತಿ ಇರುವುದಿಲ್ಲ. ದೇಶ ರಕ್ಷಣೆಗಾಗಿಯೇ ಇರುವುದು ಈ ಪಡೆ. ದೇಶಕ್ಕೋಸ್ಕರ ಎಲ್ಲವನ್ನು ತ್ಯಾಗ ಮಾಡಿ ಹೋರಾಡಿದ್ದಾರೆ. ವಿಜಯಕ್ಕಾಗಿ ಯಾರು ಹೋರಾಟ ಮಾಡಿರುತ್ತಾರೋ ಗೆದ್ದ ನಂತರ ಅವರೇ ಇರುವುದಿಲ್ಲ. ಕೊರೆಯುವ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಸೈನಿಕರು ಹೋರಾಟ ಮಾಡುತ್ತಾರೆ. ಅಂತಹ ವೀರ ಯೋಧರಿಗೆ ನನ್ನದೊಂದು ಸಲಾಮ್ ಎಂದು ಭಾವುಕವಾಗಿ ನುಡಿದರು.
ನಮ್ಮ ಭಾರತೀಯ ಸೈನಿಕರು ಶಿಸ್ತಿನ ಸಿಪಾಯಿಗಳು. ಹಲವಾರು ಸವಾಲುಗಳ ನಡುವೆಯೇ ಹೋರಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಮುನ್ನುಗ್ಗುತ್ತಿದೆ. ಅದಕ್ಕೆ ಪೂರಕವಾಗಿ ನಾಗರಿಕರು ಕೂಡ ಕೈ ಜೋಡಿಸುತ್ತಿದ್ದಾರೆ. ಸೈನಿಕ ಪರಿವಾರಕ್ಕೆ ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ಭರವಸೆ ನೀಡಿದರು.
ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೆಂದ್ರ, ಸೇನಾಪಡೆಯ ಅಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.