Advertisement
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತಲಾ ಒಂದು ಸ್ಥಾನ ದೊರಕಿತ್ತು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ಅವರು ಆರಂಭದಲ್ಲೇ ಸಚಿವರಾಗಿದ್ದರೆ, ಸುಳ್ಯ ಶಾಸಕ ಎಸ್. ಅಂಗಾರ ಸಂಪುಟಕ್ಕೆ ಸೇರಿ 7 ತಿಂಗಳಾಗಿವೆ. ಆದರೆ ಈಗ ಹೊಸ ಸಂಪುಟದಲ್ಲಿ ಇವರು ಮುಂದು ವರಿಯುವರೇ? ಅಥವಾ ಹೊಸಬರಿಗೆ ಅವಕಾಶವಿದೆಯೇ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
Related Articles
Advertisement
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಉಳಿಸಿಕೊಂಡರೆ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಅಥವಾ ಬಂಟ ಸಮುದಾಯಕ್ಕೆ ಅವಕಾಶ ಸಿಗಲೂ ಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಉತ್ತಮ ಆಡಳಿತ ನೀಡಬೇಕೆಂಬ ಹೊಣೆಗಾರಿಕೆ ಇದೆ. ಇದರೊಂದಿಗೆ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಶಾಸಕರಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಹೆಚ್ಚು ಜನಪರ ಕೆಲಸಗಳನ್ನು ಮಾಡಲು ಸಾಧ್ಯ ಎಂಬುದು ತಿಳಿದಿದ್ದು, ಯೋಚಿಸಿ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.
ಬೊಮ್ಮಾಯಿ ಅವರು ಮತ್ತು ಹೈಕಮಾಂಡ್ ಇಬ್ಬರೂ ಸೇರಿ ಸಚಿವ ಸಂಪುಟವನ್ನು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಕರಾವಳಿಯಿಂದ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಸಂಗತಿ ಕುತೂಹಲ ಮೂಡಿಸಿದೆ. ಈ ಮಧ್ಯೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೇಮಕವಾದ ವಿವಿಧ ನಿಗಮ -ಮಂಡಳಿಗಳ ಲ್ಲಿರುವ ಕರಾವಳಿ ನಾಯಕರ ಹುದ್ದೆ ಬದಲಾವಣೆ ಆಗಲಿ ದೆಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.