Advertisement

ವಿದ್ಯಾರ್ಥಿಗಳ ಪೋಷಕರಿಗೆ ವಿಶ್ವಾಸ ಮೂಡಿಸಿ: ಸಚಿವರುಗಳಿಗೆ ಸಿಎಂ ಸಲಹೆ   

09:55 PM Aug 22, 2021 | Team Udayavani |

ಬೆಂಗಳೂರು: ನಾಳೆಯಿಂದ ಶಾಲೆಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭಗೊಳ್ಳುತ್ತಿದ್ದು, ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳು, ಆಯಾ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು, ಶಿಕ್ಷಕರನ್ನು ಪ್ರೋತ್ಸಾಹಿಸಿ, ಪೋಷಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಿ ಎಂದು ಸಲಹೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಇಂದು(ಆ.22) ಸಂಜೆ ಈ ಕುರಿತು  ಟ್ವೀಟ್ ಮಾಡಿರುವ ಸಿಎಂ, ಮಕ್ಕಳ ಸುರಕ್ಷತೆಯ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯದ ಹಿತಾಸಕ್ತಿಗಳನ್ನೂ ಪರಿಗಣಿಸಿ, ತಜ್ಞರ ಸಲಹೆಗಳಿಗೆ ಅನುಗುಣವಾಗಿ, ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು, ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಯಾವುದೇ ಆತಂಕವಿಲ್ಲದೆ ಸರ್ಕಾರದೊಂದಿಗೆ ಸಹಕರಿಸಲು ಕೋರುತ್ತೇನೆ ಎಂದಿದ್ದಾರೆ.

ಇನ್ನು ಕೋವಿಡ್‌ ಮಹಾಮಾರಿ ಆರ್ಭಟದಿಂದ ಆರಂಭ ಆಗದೇ ಇದ್ದ ಶಾಲೆಗಳನ್ನು ಕೋವಿಡ್‌ ಸೋಂಕು ಕಡಿಮೆಯಾಗಿರುವ ಹಿನ್ನೆಲೆ ಸರ್ಕಾರ ಆರಂಭ ಮಾಡಲು ಮುಂದಾಗಿದೆ. ಆ.23ರ ಸೋಮವಾರದಿಂದ 9 ರಿಂದ 12ನೇ ತರಗತಿಗಳು ಶುರುವಾಗಲಿದ್ದು, ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next