Advertisement
ನವೆಂಬರ್‌ನಲ್ಲಿ ರಾಜ್ಯದಲ್ಲಿ ನಡೆಯ ಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶ “ಇನ್ವೆಸ್ಟ್ ಕರ್ನಾಟಕ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು ಮತ್ತು ಹೈಕಮಿಷನರ್‌ಗಳ ಜತೆಗೆ ಸಮಾಲೋಚನೆ ನಡೆಸುವುದು ಮುಖ್ಯಮಂತ್ರಿಯ ಭೇಟಿಯ ಪ್ರಮುಖ ಉದ್ದೇಶ.
Related Articles
Advertisement
ಮುಖಂಡರ ಸೇರ್ಪಡೆಚರ್ಚೆ ಸಂಭವ
ಅನ್ಯಪಕ್ಷಗಳಿಂದ ಬರುವವರನ್ನು ಸೇರಿಸಿಕೊಳ್ಳುವ ಕುರಿತಂತೆ ಮುಖ್ಯ ಮಂತ್ರಿಯು ನಡ್ಡಾ ಜತೆಗೆ ಚರ್ಚಿಸುವ ಸಾಧ್ಯತೆ ಇದೆ. ಶನಿವಾರ ಬಿಜೆಪಿಗೆ ಸೇರಿರುವ ವರ್ತೂರು ಪ್ರಕಾಶ್ ಸಹಿತ ಕೆಲವರನ್ನು ಸೇರಿಸಿಕೊಳ್ಳಲು ವರಿಷ್ಠರ ಆಕ್ಷೇಪವಿತ್ತು ಎನ್ನಲಾಗಿದೆ. ಅದೇ ಕಾರಣಕ್ಕೆ ಶನಿವಾರ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿ ಮತ್ತು ಮುಖ್ಯಮಂತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಮಾತುಕತೆ ನಡೆಸಿ, ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.