Advertisement
ನಗರದಲ್ಲಿ ರವಿವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಮತ್ತು ರಾಜ್ಯಮಟ್ಟದ ಸಮಾ ವೇಶದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ನಿರ್ದೇ ಶನಾಲಯದ ಮೂಲಕ ಕೃಷಿ ಉತ್ಪನ್ನಗಳಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಒಟ್ಟಾರೆ ರೈತರ ಆದಾಯ ಹೆಚ್ಚುತ್ತದೆ ಎಂದರು.
Related Articles
Advertisement
ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸರಕಾರದ ರೈತರ ಆದಾಯ ದ್ವಿಗುಣ ಸಮಿತಿಯ ಮುಖ್ಯಸ್ಥ ಅಶೋಕ್ ದಳವಾಯಿ, ಪತ್ರಕರ್ತ ಎಚ್.ಆರ್. ರಂಗನಾಥ್, ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ| ಎಸ್. ಶಿವರಾಜಪ್ಪ ಮುಂತಾದವರಿದ್ದರು.
ಬೆಲೆ ನಿಯಂತ್ರಣವೇ ದೊಡ್ಡ ಸಮಸ್ಯೆ :
ಕೃಷಿ ಬೆಳೆಗಳ ಬೆಲೆ ನಿಯಂತ್ರಣ ಮತ್ತು ಬೆಲೆ ನಿಗದಿ ದೊಡ್ಡ ಸಮಸ್ಯೆ ಯಾಗಿದೆ. ವಿಶ್ವ ವ್ಯಾಪಾರ ಸಂಘಟನೆಗೆ(ಡಬ್ಲ್ಯುಟಿಒ) ಸಹಿ ಹಾಕಿದ ಬಳಿಕ ರೈತರ ಹಣೆಬರಹವೇ ಬದಲಾಗಿದೆ. ಇದರಿಂದ ಜಾರಿಗೆ ಬಂದಿರುವ ಮುಕ್ತ ಮಾರುಕಟ್ಟೆಯಿಂದ ಬೆಲೆ ನಿಯಂತ್ರಣ ಹಕ್ಕನ್ನೇ ಕಳೆದುಕೊಂಡಿದ್ದು, ಎಪಿಎಂಸಿ ಕಾಯ್ದೆ ತರುವ ಮುನ್ನವೇ, ಅಂದರೆ 2007ರಲ್ಲೇ 47 ದೈತ್ಯ ಕಂಪೆನಿ
ಗಳು ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಇವೆಲ್ಲ ಕೃಷಿ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಸಹಿ ಹಾಕಿದ್ದರ ಪರಿಣಾಮವಾ ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರ ಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಮಾರ್ಚ್ ವೇಳೆಗೆ ಎಲ್ಲರಿಗೂ ಬೆಳೆ ಪರಿಹಾರ :
ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ 12 ಲಕ್ಷ ಎಕರೆಯಷ್ಟು ಬೆಳೆ ನಷ್ಟವಾಗಿದೆ. ಕೊರೊನಾದ ಕಷ್ಟ ಕಾಲದಲ್ಲೂ ಕೇಂದ್ರ ಸರಕಾರದ ನೆರವು ಸೇರಿ ರಾಜ್ಯ ಸರಕಾರವು 2 ಪಟ್ಟು ಪರಿಹಾರ ನೀಡುತ್ತಿದ್ದು, ಒಂದು ತಿಂಗಳಿನಲ್ಲಿ ರೈತರ ಬ್ಯಾಂಕ್ ಖಾತೆಗೆ 800 ಕೋಟಿ ರೂ. ಮೊತ್ತವನ್ನು ಜಮೆ ಮಾಡಲಾಗಿದೆ. ಮುಂದಿನ ಫೆಬ್ರವರಿ, ಮಾರ್ಚ್ ಹೊತ್ತಿಗೆ ಎಲ್ಲರಿಗೂ ಪರಿಹಾರ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿವೇತನದಿಂದ 2.40 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಿದ್ದು, ಈ ಸಂಖ್ಯೆ 2021-22ರಲ್ಲಿ ಶೈಕ್ಷಣಿಕ ವರ್ಷಾಂತ್ಯಕ್ಕೆ 5 ಲಕ್ಷ ತಲುಪಲಿದೆ.-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ