Advertisement
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೂರು ದಶಕ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ರಥ-ಕಾಯಕ ಪಥ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿಯ ಸಂರಕ್ಷಣೆ ವಿಚಾರದಲ್ಲಿ ಸರಕಾರ ಸದಾ ಕಾಲ ಕನ್ನಡಿಗರ ಜತೆಗಿರಲಿದೆ ಎಂದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತ ನಾಡಿ, ಕರ್ನಾಟಕ ಏಕೀಕರಣದ ಮೊದಲು ಇಡೀ ಕನ್ನಡ ನಾಡು ಹರಿದು ಹಂಚಿ ಹೋಳಾಗುವ ಅಂಚಿನಲ್ಲಿತ್ತು. ಆಗ ಕುವೆಂಪು ಅಖಂಡ ಕರ್ನಾಟಕ ಉಳಿವಿಗಾಗಿ ಹೋರಾಟದ ಅಖಾಡಕ್ಕೆ ಇಳಿದರು. ಆ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರೂ ಇಂದಿಗೂ ಕುವೆಂಪು ಅವರನ್ನು ಪೂಜಿಸಬೇಕು ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Related Articles
Advertisement