Advertisement

ಗಾಂಧಿ ಕುಟುಂಬ ಪ್ರಜಾಪ್ರಭುತ್ವಕ್ಕಿಂತ ದೊಡ್ಡದಾ..? ಸಿಎಂ ಬೊಮ್ಮಾಯಿ ಪ್ರಶ್ನೆ

06:02 PM Jun 18, 2022 | Team Udayavani |

ಚಿತ್ರದುರ್ಗ: ಬೌದ್ಧಿಕ, ರಾಜಕೀಯ, ಹಾಗೂ ಸಂಘಟನಾತ್ಮಕವಾಗಿ ಕಾಂಗ್ರೆಸ್‌ನವರು ದಿವಾಳಿಯಾಗಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು.

ಶಾಂತಿ ಇದ್ದಲ್ಲಿ ಅಭಿವೃದ್ಧಿ ಸಾಧ್ಯ. ಅಧಿಕಾರಕ್ಕಾಗಿ ಯಾವುದೇ ಮಾರ್ಗ ಹಿಡಿಯಲು ಸಿದ್ಧರಾಗಿದ್ದಾರೆ. ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಬೀದಿಗಿಳಿದು ಕ್ಷೋಭೆ ಸೃಷ್ಟಿಸುತ್ತಿದ್ದಾರೆ. ದೇಶದ ಜನ ಇದನ್ನು ಒಪ್ಪುವುದಿಲ್ಲ ಎಂದರು.

1975 ರ ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರ ಮಾಡಿ ಎಲ್ಲಾ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದ ಕಾಂಗ್ರೆಸ್‌ನವರು ಈಗ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಗಾಂಧಿಯನ್ನು ಇ.ಡಿ. ವಿಚಾರಣೆಗೆ ಕರೆದರೆ ಪ್ರತಿಭಟಿಸುತ್ತಾರೆ. ಗಾಂಧಿ ಕುಟುಂಬ ಪ್ರಜಾಪ್ರಭುತ್ವಕ್ಕಿಂತ ದೊಡ್ಡದಾ..? ದೇಶದಲ್ಲಿ ಎಲ್ಲದಕ್ಕಿಂತ ದೊಡ್ಡದು ನ್ಯಾಯ. ಅದನ್ನು ನೀಡುವುದು ಕಾನೂನು ಎಂದು ಹೇಳಿದರು.

ನಮ್ಮ ಅನೇಕ ನಾಯಕರನ್ನು ವಿನಾಕಾರಣ ಜೈಲಿನಲ್ಲಿಟ್ಟಿದ್ದರು. ಆಗ ನಾವು ಪ್ರತಿಭಟನೆ ಮಾಡಿದ್ದೇವಾ, ಕಾಂಗ್ರೆಸ್ ಬ್ಯೂರೋ ಎಂದು ಸಿಬಿಐ ಕರೆಯುತ್ತಿದ್ದುದ್ದನ್ನು ನೆನಪು ಮಾಡಿಕೊಳ್ಳಬೇಕು ಎಂದರು.

Advertisement

ಇದನ್ನೂ ಓದಿ : ಅಗ್ನಿಪಥ್ ಗೆ ವಿರೋಧ; ಅಗ್ನಿವೀರರಿಗೆ ಶೇ.10ರಷ್ಟು ಉದ್ಯೋಗ ಮೀಸಲು ಘೋಷಿಸಿದ ರಕ್ಷಣಾ ಇಲಾಖೆ

ಈಗ ಅಧಿಕಾರಕ್ಕಾಗಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾರೆ. ಇವರಿಗೆ ದೇಶವನ್ನು ಮುನ್ನಡೆಸುವ ಯಾವುದೇ ಹಕ್ಕು ಇಲ್ಲ. ಕರ್ನಾಟಕದ ಕಾಂಗ್ರೆಸ್ ನಾಯಕರು ಈಗಾಗಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆಯಲ್ಲಿ ಖಾತೆಗೆ ಕಿತ್ತಾಡಿಕೊಳ್ಳುತ್ತಿದ್ದಾರೆ. 2023ರ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಹಡಗು ಮುಳುಗಿ ಹೋಗಲಿದೆ. ನಮ್ಮದು ಭಾರತ ಮಾತಾ ಕೀ ಜೈ, ಕಾಂಗ್ರೆಸ್‌ದು ಸೋನಿಯಾ ಮಾತಾ ಕೀ ಜೈ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವ ಧನ ಹೆಚ್ಚಿಸುವ ಬೇಡಿಕೆಗೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಒಳ್ಳೆಯ ಸುದ್ದಿ ಕೊಡುತ್ತೇನೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next