Advertisement
ಈ ವೇಳೆ ಮುಖ್ಯಮಂತ್ರಿಗಳು ಅಧಿಕಾರಿಗಳು, ಸಚಿವರು, ಶಾಸಕರ ಜತೆ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಪಡೆದರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಸುಳ್ಯ ಶಾಸಕ ಎಸ್.ಅಂಗಾರ ಅವರು ಭೂಕಂಪನ ಹಾಗೂ ಮಳೆಹಾನಿ ಬಗ್ಗೆ ವಿವರಿಸಿದರು. ಈ ವೇಳೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳು ಸುಳ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನಿರೀಕ್ಷಣ ಮಂದಿರದ ಬಳಿ ಸೇರಿದ್ದರು. ತಮ್ಮ ಮನವಿ, ಬೇಡಿಕೆ ಪತ್ರಗಳನ್ನು ನೀಡಲು ಸಿದ್ಧರಾಗಿದ್ದರು. ಆದರೆ ಸಿಎಂ 4.30ರ ವೇಳೆಗೆ ಐಬಿಗೆ ಆಗಮಿಸಿ ಕೇವಲ 15 ನಿಮಿಷದಲ್ಲಿ ಸುಳ್ಯದಿಂದ ತೆರಳಿದರು. ಜನರ ಸಮಸ್ಯೆ ಆಲಿಸುವ ಹಾಗೂ ಪರಿಹಾರ ಘೋಷಿಸುವ ನಿರೀಕ್ಷೆಯಲ್ಲಿದ್ದ ಜನರು ಅವಕಾಶ ಸಿಗದ ಬಗ್ಗೆ ಬೇಸರಗೊಂಡು ನಿರ್ಗಮಿಸಿದರು. ಭೇಟಿ ವೇಳೆ ಪೇಟೆಯಲ್ಲಿ ಝೀರೋ ಟ್ರಾಫಿಕ್ ಏರ್ಪಡಿಸಲಾಗಿತ್ತು.