ನವದೆಹಲಿ: ಕಳೆದ ಕೆಲ ತಿಂಗಳುಗಳಿಂದ ಹೆಚ್ಚು ಸದ್ದು ಮಾಡಿರುವ ಕ್ಲಬ್‌ಹೌಸ್ ಆ್ಯಪ್‌ನಲ್ಲಿ ಇದೀಗ ಕನ್ನಡ ಸೇರಿ ಒಟ್ಟು 13 ಭಾಷೆಗಳನ್ನು ಪರಿಚಯಿಸಲಾಗಿದೆ. ಈ ವಿಚಾರವಾಗಿ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡಿರುವ ಕ್ಲಬ್‌ಹೌಸ್‌ನಲ್ಲಿ ಭಾಷೆಗಳನ್ನು ಸೇರಿಸಲು ಸಾಕಷ್ಟು ಬೇಡಿಕೆಯಿತ್ತು. ಇದೀಗ 13 ಭಾರತೀಯ ಮತ್ತು ವಿದೇಶಿ ಭಾಷೆಗಳನ್ನು ಸೇರಿಸಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯ ಭಾಷೆಗಳನ್ನು ಸೇರಿಸಲಾಗುವುದು ಎಂದು ಕ್ಲಬ್‌ಹೌಸ್ ಅಂತಾರಾಷ್ಟ್ರೀಯ ಮುಖ್ಯಸ್ಥೆ ಆರತಿ ರಾಮಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಳಪೆ ಪ್ರದರ್ಶನಕ್ಕೆ ಐಪಿಎಲ್ ಕಾರಣವಲ್ಲ: ಗೌತಮ್ ಗಂಭೀರ್
ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯನ್ನು ಹೊಸದಾಗಿ ಸೇರಿಸಲಾಗಿದೆ. ಇದರಿಂದಾಗಿ ಬಳಕೆದಾರರು ಆಯಾ ಭಾಷೆಯಲ್ಲೇ ನೋಟಿಫೀಕೇಶನ್ ಪಡೆಯಬಹುದು ಮತ್ತು ಅದೇ ಭಾಷೆಯಲ್ಲಿ ವ್ಯವಹರಿಸಬಹುದಾಗಿದೆ.
ರಿಪ್ಲೇ ಆಯ್ಕೆ: ಇದರ ಜೊತೆಗೆ ಇನ್ನು ಕೆಲ ದಿನಗಳಲ್ಲಿ ಕ್ಲಬ್‌ಹೌಸ್‌ನಲ್ಲಿ ರಿಪ್ಲೇ ಆಯ್ಕೆಯೂ ಬರಲಿದೆ. ಇದರಿಂದಾಗಿ ನೀವು ಈಗಾಗಲೇ ಮುಗಿದಿರುವ ಸಂಭಾಷಣೆಯನ್ನು ಮತ್ತೆ ಕೇಳಬಹುದಾಗಿದೆ.