Advertisement

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

06:11 PM Oct 22, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ನಿರಂತರವಾಗಿ ಕಾಡುತ್ತಿರುವ ಮಳೆರಾಯ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ಸೋಮವಾರ ತಡರಾತ್ರಿ ಬೆಂಗಳೂರಿನಲ್ಲಿ ಮೇಘಸ್ಫೋಟ ಸಂಭವಿಸಿ ಯಲಹಂಕ ವಲಯದಲ್ಲಿ ದಾಖಲೆಯ 42 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

Advertisement

ಯಲಹಂಕ ವಲಯದಲ್ಲಿ ಮೇಘಸ್ಫೋಟ ಸಂಭವಿಸಿದ್ದರ ಪರಿಣಾಮ ಇಲ್ಲಿನ 10 ಬಡಾವಣೆಗಳು ಜಲಾವೃತವಾಗಿದ್ದು, 4000ಕ್ಕೂ ಅಧಿಕ ನಿವಾಸಿಗಳು ತೊಂದರೆಗೀಡಾಗಿದ್ದಾರೆ.

ಭರದಿಂದ ಸಾಗಿದ ರಕ್ಷಣಾ ಕಾರ್ಯ
ಇನ್ನು ಕೆವಿಎ (ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್) ಯಲ್ಲಿ  ಪ್ರವಾಹದಿಂದಾಗಿ, ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ನಾಲ್ಕು ಅಡಿಗೂ ಹೆಚ್ಚು ನೀರು ನುಗ್ಗಿದ್ದರಿಂದ 3000ಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಎರಡೂ ದೋಣಿಗಳನ್ನು ನಿಯೋಜಿಸಿವೆ. ಘಟನೆಯ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು, ಉಮಾಶಂಕರ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು.

ಸಚಿವ ಕೃಷ್ಣ ಬೈರೇಗೌಡ ಭೇಟಿ
ಈ ವೇಳೆ ಸ್ಥಳಕ್ಕಾಗಮಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ‘ದಿಢೀರ್ ಮೋಡ ಕವಿದ ಕಾರಣ ದೊಡ್ಡಬೊಮ್ಮಸಂದ್ರ ಕೆರೆಯು 18 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಸಾಮರ್ಥ್ಯ ತಲುಪಿದ್ದು, ಚರಂಡಿ ಹಾಗೂ ರಸ್ತೆಗಳಿಗೆ ನೀರು ಹರಿದು ಪ್ರವಾಹ ಉಂಟಾಗಿದೆ. ಜಿಕೆವಿಕೆ ಪ್ರದೇಶ ಮತ್ತು ವಿದ್ಯಾರಣ್ಯಪುರದಲ್ಲಿ ಮೋಡ ಕವಿದ ಕಾರಣ ದೊಡ್ಡಬೊಮ್ಮಸದ್ರ ಕೆರೆಗೆ ನೀರು ನುಗ್ಗಿ ಪ್ರವಾಹ ಉಂಟಾಗಿದ್ದು, ಜನರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ ಎಂದರು.

Advertisement

ದಾಖಲೆಯ ಮಳೆ ಎಂದ ತುಷಾರ್ ಗಿರಿನಾಥ್
ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದ್ದು, ಚೌಡೇಶ್ವರಿನಗರದಲ್ಲಿ 157ಮಿಮೀ, ಯಲಹಂಕದಲ್ಲಿ 141ಮಿಮೀ, ವಿದ್ಯಾರಣ್ಯಪುರದಲ್ಲಿ 109ಮಿಮೀ, ಜಕ್ಕೂರು 98ಮಿಮೀ, ಕೊಡಿಗೇಹಳ್ಳಿಯಲ್ಲಿ 81.5ಮಿಮೀ ಮಳೆ ಸುರಿದಿದ್ದರಿಂದ ಯಲಹಂಕ ಕೆರೆ ತುಂಬಿ ಹರಿದಿದೆ. ಚರಂಡಿಗಳ ಮೂಲಕ ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಭಾರೀ ಮಳೆ ಮತ್ತು 10 ಕೆರೆಗಳು ತುಂಬಿದ ಕಾರಣ, 4000 ಮನೆಗಳು ಪರಿಣಾಮ ಬೀರಿವೆ.

Advertisement

Udayavani is now on Telegram. Click here to join our channel and stay updated with the latest news.

Next