Advertisement
ಅಮೆರಿಕದ ಬೌದ್ಧಿಕ ಆಸ್ತಿ ಹಾಗೂ ಖಾಸಗಿ ಮಾಹಿತಿಯನ್ನು ರಕ್ಷಿಸುವ ಕ್ರಮವಾಗಿ ಹ್ಯೂಸ್ಟನ್‌ನಲ್ಲಿರುವ ಚೀನ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಸೂಚನೆ ನೀಡಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಹೊರಬಿದ್ದಿದೆ.
ಚೀನ ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳದಿದ್ದರೆ ಚೀನದ ಇನ್ನಷ್ಟು ರಾಯಭಾರ ಕಚೇರಿಗಳನ್ನು ಮುಚ್ಚಲಾಗುವುದು ಎಂದರು.
Related Articles
Advertisement
ಅಡಗಿರುವ ವಿಜ್ಞಾನಿ: ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಚೀನ ರಾಯಭಾರ ಕಚೇರಿಯಲ್ಲಿ ವಿಜ್ಞಾನಿ ಟಾಂಗ್ ಜುವಾನ್ ಅಡಗಿದ್ದಾರೆಂದು ಅಮೆರಿಕದ ತನಿಖಾ ಸಂಸ್ಥೆ ಆರೋಪಿಸಿದೆ. ಅವರ ವಿರುದ್ಧ ವೀಸಾ ವಂಚನೆ ಆರೋಪಗಳನ್ನೂ ಹೊರಿಸಲಾಗಿದೆ. ಅಮೆರಿಕಕ್ಕೆ ಪ್ರವೇಶಾವಕಾಶ ಪಡೆವ ನಿಟ್ಟಿನಲ್ಲಿಯೇ ಚೀನದ ಸೇನೆಯ ಜತೆಗೆ ಇರುವ ನಿಕಟ ಸಂಪರ್ಕದ ಮಾಹಿತಿ ನೀಡಿಲ್ಲ.
ಆಕೆ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಅವರ ವಿರುದ್ಧ ಕೋರ್ಟ್‌ನಲ್ಲಿ ಜೂ.26 ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ನಂತರ ಅವರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಪ್ರಬಲ ಆರೋಪ ಮಾಡಿದೆ.
ಅಪಪ್ರಚಾರವಿದೆ: ರಾಯಭಾರ ಕಚೇರಿ ಮುಚ್ಚುವ ಆದೇಶದ ಹಿಂದೆ ಅಪಪ್ರಚಾರ ಕೆಲಸ ಮಾಡಿದೆ ಎಂದು ಚೀನ ವಿದೇಶಾಂಗ ಸಚಿವಾಲಯ ದೂರಿದೆ. ಬೀಜಿಂಗ್‌ನಲ್ಲಿ ಮಾತನಾಡಿದ ವಾಂಗ್ ವೆನ್‌ಬಿನ್ ಅಮೆರಿಕ ಸರಕಾರದ ಆದೇಶ ಅಂತಾರಾಷ್ಟ್ರೀಯ ಕಾನೂನುಗಳಿಗೆ ಚ್ಯುತಿ ತರುತ್ತದೆ. 2 ದೇಶಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.