Advertisement

ಫೈಟ್‌ನೊಂದಿಗೆ ಗೋಸಿಗ್ಯಾಂಗ್‌ ಚಿತ್ರೀಕರಣ ಮುಕ್ತಾಯ

10:35 AM Nov 07, 2017 | Team Udayavani |

ಯತಿರಾಜ್‌ ಜಗ್ಗೇಶ್‌ ಅಭಿನಯದ “ಗೋಸಿ ಗ್ಯಾಂಗ್‌’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕೆ.ಶಿವಕುಮಾರ್‌ ನಿರ್ಮಾಣದ ಈ ಚಿತ್ರಕ್ಕೆ ನಂದಿನಿ ಬಡಾವಣೆಯಲ್ಲಿ ಮೂರು ಜನ ನಾಯಕರು ಮತ್ತು ಖಳನಟರೊಂದಿಗೆ ನಡೆದ ಗ್ಯಾಂಗ್‌ವಾರ್‌ನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ.

Advertisement

ಇನ್ನು ವಿಜಯಪ್ರಕಾಶ್‌ ಹಾಡಿದ “ಕೆಂಪೇಗೌಡರ ಊರಲ್ಲಿ ಹೀರೋಸ್‌ ಆದ್ವಿ ನಾವಿಲ್ಲಿ, ನಮ್ಗೆ ಇಲ್ಲ ಕೋಟಿ ಕನಸು, ಇರೋದು ಒಂದು ಕಲೆಯ ಡ್ರೀಮ್ಸ್‌..’ ಎಂಬ ಹಾಡನ್ನು ನಿರ್ದೇಶಕ ರಾಜು ದೇವಸಂದ್ರ ಬರೆದಿದ್ದು, ನೃತ್ಯ ನಿರ್ದೇಶಕ ಮನು ಈ ಹಾಡನ್ನು ಇಸ್ಕಾನ್‌ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರಕ್ಕೆ ಹಾಲೇಶ್‌ ಕ್ಯಾಮೆರಾ ಹಿಡಿದರೆ, ಆರವ್‌ ರುಶಿಕ್‌ ಸಂಗೀತವಿದೆ.

ಪ್ರಭು ಅವರ ಕಲಾನಿರ್ದೇಶನವಿದೆ. ಕೋಟೆಕೊಪ್ಪ ಅವರ ಸಂಕಲನವಿದೆ. ರಾಜು ದೇವಸಂದ್ರ, ದಯಾನಂದಸ್ವಾಮಿ ಸಂಭಾಷಣೆ ಇದೆ. ಯೋಗರಾಜ್‌ ಭಟ್‌, ಶಶಿಕರ ಪಾತೂರು, ಹರಿಮಾವಳ್ಳಿ, ಅಪ್ಪವರ್ಧನ್‌ ಅವರ ಸಾಹಿತ್ಯವಿದೆ. ಮಾಸ್‌ ಮಾದ, ಅಪ್ಪುವೆಂಕಟೇಶ್‌ ಸಾಹಸ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಜಯ್‌ ಕಾರ್ತಿಕ್‌, ರೋಹಿತ್‌ ಅಭಯ್‌, ಅಪ್ಪು ವೆಂಕಟೇಶ್‌, ಮೋನಿಕ, ಅನುಷ, ಸೋನು ಪಾಟೀಲ್‌ ಇತರರು ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next