Advertisement

ಜಿಲ್ಲಾ ಗೃಹರಕ್ಷಕ ದಳ ತರಬೇತಿ ಶಿಬಿರ ಸಮಾರೋಪ

10:58 AM Jan 12, 2018 | Team Udayavani |

ಮಹಾನಗರ: ಶಿಸ್ತು, ಸಂಯಮ ಮತ್ತು ಸೇವೆಯಲ್ಲಿ ಜಿಲ್ಲಾ ಗೃಹರಕ್ಷಕ ದಳ ಹೆಸರುಪಡೆದಿದೆ ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್‌ ಹೇಳಿದರು. ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಜಿಲ್ಲಾ ಗೃಹರಕ್ಷಕ ದಳ ವಾರ್ಷಿಕ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ನಾಗರಿಕ ಸಮಾಜದ ರಕ್ಷಣೆಗೆ ಪೊಲೀಸ್‌ ಇಲಾಖೆಯ ಜತೆ ಗೃಹರಕ್ಷಕ ದಳ ಕೂಡ ಕೈಜೋಡಿಸುವ ಅಗತ್ಯವಿದೆ ಎಂದು ಹೇಳಿದರು.

Advertisement

ಸಮಾಜದ ರಕ್ಷಣೆಯಲ್ಲಿ ಪೊಲೀಸ್‌ ಮತ್ತು ಗೃಹರಕ್ಷಕ ದಳ ಎರಡು ಚಕ್ರವಿದ್ದಂತೆ. ಗೃಹರಕ್ಷಕ ದಳದ ಸಿಬಂದಿ ಯಾವುದೇ ಫಲಾಪೇಕ್ಷೆ ಇಲ್ಲದೆ, ಸರಕಾರದ ಗೌರವ ಧನಕ್ಕೆ ತೃಪ್ತಿಪಟ್ಟು ಕೆಲಸ ನಿರ್ವಹಿಸುತ್ತಾರೆ. ಪ್ರಾಮಾಣಿಕ ಪ್ರಯತ್ನ ಮತ್ತು ಶ್ರಮ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದು ಹೇಳಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ. ಶಿವರಾಮಯ್ಯ, ಉಡುಪಿ ಜಿಲ್ಲೆ ಗೃಹರಕ್ಷಕದಳ ಕಮಾಂಡೆಂಟ್‌ ಡಾ| ಕೆ. ಪ್ರಶಾಂತ್‌ ಶೆಟ್ಟಿ, ದ.ಕ. ಜಿಲ್ಲೆ ಗೃಹರಕ್ಷಕ ದಳ ಕಮಾಂಡೆಂಟ್‌ ಡಾ| ಮುರಲೀ ಮೋಹನ ಚೂಂತಾರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next