Advertisement

ಮುಚ್ಚಿರುವ ಡೇ ಕೇರ್‌ ಸೆಂಟರ್‌: ಮಹಿಳಾ ಉದ್ಯೋಗಿಗಳ ಗೋಳು

12:37 AM Jul 03, 2020 | Sriram |

ವಿಶೇಷ ವರದಿ-ಮಹಾನಗರ: ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಡೇ ಕೇರ್‌ ಸೆಂಟರ್‌ಗಳು, ನರ್ಸರಿ, ಮೋಂಟೆಸ್ಸರಿ, ಅಂಗನವಾಡಿಗಳು ಮುಚ್ಚಿವೆ. ಇದರ ನೇರ ಪರಿಣಾಮ ಈಗ ಮಹಿಳಾ ಉದ್ಯೋಗಿಗಳ ಮೇಲಾಗುತ್ತಿದೆ.

Advertisement

ಬೆಳಗ್ಗೆ ಡ್ಯುಟಿಗೆ ಹೋಗುವ ಮೊದಲು ಮಕ್ಕಳನ್ನು ಡೇ ಕೇರ್‌ ಸೆಂಟರ್‌/ಮೋಂಟೆ ಸ್ಸರಿಗಳಲ್ಲಿ ಬಿಟ್ಟು ಹೋಗಿ ವಾಪಸಾಗುವಾಗ ಮಕ್ಕಳನ್ನು ಕರೆತರುತ್ತಿದ್ದ ಮಹಿಳಾ ನೌಕರರು ತೀವ್ರ ತೊಂದರೆಗೀಡಾಗಿದ್ದಾರೆ.

ನಗರದ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ನೂರಾರು ಮಂದಿ ಮಹಿಳೆಯರು ದುಡಿ ಯುತ್ತಿದ್ದಾರೆ. ಅವರಲ್ಲಿ ಅನೇಕ ಮಂದಿಯ ಮಕ್ಕಳು ಬೆಳಗ್ಗಿನಿಂದ ಸಂಜೆಯವರೆಗೆ ಡೇ ಕೇರ್‌ ಸೆಂಟರ್‌ನಲ್ಲೇ ಉಳಿಯುತ್ತಿದ್ದರು. ಮೂರು ತಿಂಗಳುಗಳಿಂದ ಡೇ ಕೇರ್‌ ಸೆಂಟರ್‌, ಅಂಗನವಾಡಿ, ನರ್ಸರಿಗಳು ಮುಚ್ಚಲ್ಪಟ್ಟಿವೆ. ಈ ಸಮಸ್ಯೆ ಎದುರಿಸುತ್ತಿರುವವರಲ್ಲಿ ಅಧಿಕಾರಿ ವರ್ಗದವರೂ ಗುಮಾಸ್ತರೂ ಇದ್ದಾರೆ. ಬಾಡಿಗೆ ರೂಮ್‌ಗಳಲ್ಲಿ ವಾಸ ವಿದ್ದು, ಉದ್ಯೋಗ ಮಾಡುತ್ತಿರುವ ಅನೇಕ ಮಂದಿಗೆ ಡೇ ಕೇರ್‌ ಸೆಂಟರ್‌ಗಳು
ಆಪದ್ಬಾಂಧವನಂತಿದ್ದವು.

ಕೋವಿಡ್‌ ಕರ್ತವ್ಯ ನಿರತರಿಗೆ ಹೆಚ್ಚು ಸಮಸ್ಯೆ
ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲದೆ ಸರಕಾರದ ಬಹುತೇಕ ಇಲಾಖೆಗಳ ಅಧಿಕಾರಿ, ಸಿಬಂದಿಗೆ ಕೋವಿಡ್‌ ನಿಯಂ ತ್ರಣಕ್ಕೆ ಸಂಬಂಧಿಸಿದ ವಿವಿಧ ಕರ್ತವ್ಯಗಳನ್ನು ನಿಯೋಜಿಸಲಾಗಿದೆ.

ಹೋಂ ಕ್ವಾರಂಟೈನ್‌ ನಿಗಾ ಕೂಡ ಇಂತಹ ಅಧಿಕಾರಿ, ನೌಕರರ ಮೇಲಿದೆ. ಅನೇಕ ಮಂದಿ ವೈದ್ಯರು, ವೈದ್ಯಕೀಯ ಸಿಬಂದಿ ಕೂಡ ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಲಾರದ ಸ್ಥಿತಿಯಲ್ಲಿದ್ದಾರೆ. ಇವರು ಒಂದೆಡೆ ಆರೋಗ್ಯದ ಅಪಾಯ ಎದುರಿಸುತ್ತಿದ್ದರೆ, ಇನ್ನೊಂದೆಡೆ ಮಕ್ಕಳಿಗೂ ವ್ಯವಸ್ಥೆ ಇಲ್ಲದೆ ಅತಂತ್ರರಾಗಿದ್ದಾರೆ. ಇತ್ತ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಲ್ಲಿ ಕೆಲವರ ಉದ್ಯೋಗದ ಅವಧಿಯೂ ಅಧಿಕವಾಗಿದ್ದು, ಮತ್ತಷ್ಟು ಸಂಕಷ್ಟ ಎದುರಾಗಿದೆ.

Advertisement

ಕೆಲಸದಾಳುಗಳ ಕೊರತೆ
ಈಗ ಕೋವಿಡ್‌ ಆತಂಕದಿಂದಾಗಿ ಮನೆ ಕೆಲಸದವರ ಕೊರತೆಯೂ ಇದೆ. ನಗರದಲ್ಲಿ ಹೆಚ್ಚಿನವರು ಹೊರ ಜಿಲ್ಲೆಗಳಿಂದ ಬಂದವರು ಮನೆ ಕೆಲಸ ಮಾಡುತ್ತಿದ್ದರು. ಅಂಥವರು ಊರಿಗೆ ತೆರಳಿದವರು ವಾಪಸಾಗಿಲ್ಲ ಎನ್ನುತ್ತಾರೆ ಇಲಾಖೆಯೊಂದರ ಮಹಿಳಾ ಉದ್ಯೋಗಿ.

ಒಂದೆಡೆ ಕೆಲಸದಾಳುಗಳ ಕೊರತೆ ಇದ್ದರೆ ಇನ್ನೊಂದೆಡೆ ಸುರಕ್ಷತೆಯ ದೃಷ್ಟಿ ಯಿಂದ ಕೆಲಸದಾಳುಗಳಿಗೆ ಷರತ್ತನ್ನು ಕೂಡ ವಿಧಿಸಲಾಗುತ್ತಿದೆ. “ಬಸ್‌ ಅಥವಾ ಯಾವುದೇ ವಾಹನದಲ್ಲಿ ಹೋಗಿ ಬರ ಬಾರದು. ನಡೆದುಕೊಂಡೇ ಹೋಗ ಬೇಕು ಎಂದು ನಾನು ಮಕ್ಕಳನ್ನು ನೋಡಿಕೊಳ್ಳುವ ಮನೆಯವರು ಷರತ್ತು ವಿಧಿಸಿದ್ದಾರೆ. ಹಾಗಾಗಿ ನಿತ್ಯ 14 ಕಿ.ಮೀ.ಗಳಷ್ಟು ನಡೆದುಕೊಂಡು ಹೋಗುತ್ತಿದ್ದೇನೆ’ ಎನ್ನುತ್ತಾರೆ ಮಕ್ಕಳನ್ನು ನೋಡಿ ಕೊಳ್ಳುತ್ತಿರುವ ನಗರದ ಓರ್ವ ಮಹಿಳೆ.

ಈಗ ದುಬಾರಿ
ಹಿಂದೆ ಡೇ ಕೇರ್‌ ಸೆಂಟರ್‌ಗಳಿಗೆ ಅರ್ಧ ದಿನಕ್ಕಾದರೆ 3,000- 3,500 ರೂ., ಇಡೀ ದಿನವಾದರೆ 5,000 ರೂ.ಗಳವರೆಗೆ ಹಣ ಪಾವತಿಸ ಬೇಕಿತ್ತು. ಆದರೆ ಈಗ ಒಂದು ಮಗುವನ್ನು ನೋಡಿಕೊಳ್ಳಲು 8ರಿಂದ 15,000 ರೂ.ಗಳವರೆಗೂ ಪಾವತಿ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಕೆಲವು ಮಂದಿ ಇಬ್ಬರು-ಮೂವರು ಮಹಿಳೆಯರು ಸೇರಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರೇ ಮನೆ ಕೆಲಸದವರನ್ನು ನಿಯೋ ಜಿಸುತ್ತಿರುವುದು ಕಂಡು ಬಂದಿವೆ.

ಸರಕಾರದ ಮಟ್ಟದಲ್ಲಿ ವ್ಯವಸ್ಥೆಯಾಗಬೇಕು
ಅಂಗನವಾಡಿ, ನರ್ಸರಿ, ಡೇ ಕೇರ್‌ ಸೆಂಟರ್‌ಗಳನ್ನು ತೆರೆಯುವುದಕ್ಕೆ ಈಗ ಅನುಮತಿ ಇಲ್ಲ. ಕೆಲವು ಮಹಿಳಾ ಉದ್ಯೋಗಿಗಳಿಗೆ ತೊಂದರೆಯಾಗುತ್ತಿರಬಹುದು. ಇದಕ್ಕೆ ಸರಕಾರದ ಮಟ್ಟದಲ್ಲಿಯೇ ವ್ಯವಸ್ಥೆಯಾಗಬೇಕಿದೆ.
– ಉಸ್ಮಾನ್‌ ಎ., ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next