ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ(ಜೂನ್ 26)ವೂ ಕೂಡಾ ಬರೋಬ್ಬರಿ 600ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ದರ್ಶನ್ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್ – ಸೋನಲ್ ಪ್ರೇಮ್ ಕಹಾನಿ?
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 620.73 ಅಂಕಗಳಷ್ಟು ಜಿಗಿತ ಕಂಡಿದ್ದು, 78,674.25 ಅಂಕಗಳ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಅಂತ್ಯಕಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 147.50 ಅಂಕಗಳ ಏರಿಕೆಯೊಂದಿಗೆ 23,868 ಅಂಕಗಳ ದಾಖಲೆಯ ಗಡಿ ತಲುಪಿದೆ.
ಸೂಚ್ಯಂಕ, ನಿಫ್ಟಿ ಏರಿಕೆಯ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್, ಆಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್ ಮತ್ತು ಗ್ರಾಸಿಂ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಅಪೋಲೊ ಆಸ್ಪತ್ರೆ, ಬಜಾಜ್ ಆಟೋ, ಮಹೀಂದ್ರಾ & ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಹಿಂಡಲ್ಕೋ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ. ಬ್ಯಾಂಕ್, ಆಯಲ್, ಗ್ಯಾಸ್, ಟೆಲಿಕಮ್ ಕ್ಷೇತ್ರದ ಷೇರುಗಳು ಶೇ.2ರಷ್ಟು ಲಾಭಗಳಿಸಿದೆ.
ಮಂಗಳವಾರ (ಜೂನ್ 25) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಮೊದಲ ಬಾರಿಗೆ 78,000 ಅಂಕಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ನಿಫ್ಟಿ ಕೂಡಾ ದಾಖಲೆ ಮಟ್ಟಕ್ಕೆ ತಲುಪಿತ್ತು.