Advertisement

ರೆಸಾರ್ಟ್‌, ಹೋಂ ಸ್ಟೇ ಮುಚ್ಚಿ

06:37 AM Jul 04, 2020 | Lakshmi GovindaRaj |

ಸಕಲೇಶಪುರ: ಸ್ಥಳೀಯರಿಗೂ ಪ್ರವಾಸಿಗರಿಗೂ ಸಂಘರ್ಷ ಉಂಟಾಗಬಾರದೆಂಬ ನಿಟ್ಟಿನಲ್ಲಿ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ತಾಲೂಕಿನ ಪ್ರವಾಸಿ ಸ್ಥಳವಾದ  ಮಂಜ್ರಾ ಬಾದ್‌ ಕೋಟೆಗೆ ಭೇಟಿ ನೀಡಿದ ನಂತರ ಮಾತನಾಡಿ, ಮಂಜ್ರಾಬಾದ್‌ ಕೋಟೆ ಸಕಲೇಶಪುರ ಭಾಗದಲ್ಲಿ ಪ್ರಮುಖವಾದ ಕೋಟೆ, ರೈನ್‌ ವಾಟರ್‌ ಹಾರ್‌ ವೆಸ್ಟಿಂಗ್‌ ಈ ಹಿಂದೆಯೇ ಮಾಡಿದ್ದಾರೆ.

Advertisement

ನಮ್ಮ ಪೂರ್ವಿಕರ ಜ್ಞಾನಕ್ಕೆ  ಅಭಾರಿ ಯಾಗಿದ್ದೇನೆ. ಕೋಟೆಗೆ ಬರುವ ಕೆಲವು ಕಿಡಿಗೇಡಿಗಲ್ಲಿ ತಮ್ಮ ಹೆಸರನ್ನು ಕೆತ್ತುವುದರಿಂದ ಕೋಟೆ ಮೂಲ ಸ್ವರೂಪಕ್ಕೆ ಸ್ವಲ್ಪ ಧಕ್ಕೆಯಾಗಿದೆ. ಕಳೆದ ಬಾರಿ ಕೋಟೆಯ ಅಭಿವೃದ್ಧಿಗಾಗಿ ಸುಮಾರು 3 ಕೋಟಿ  ರೂ. ಮೀಸಲಿಟ್ಟಿದ್ದರೂ ಕ್ರಿಯಾ ಯೋಜ ನೆ ಆಗದ ಕಾರಣ ಇನ್ನು ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ. ತಕ್ಷಣ ಪುರಾತತ್ವ ಇಲಾಖೆ ವತಿಯಿಂದ ಅನುಮತಿ ಪಡೆದು ಕೋಟೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಕನಿಷ್ಠವೆಂದರೂ ಸುಮಾರು 7000 ಕೋಟಿ ರೂ.ನಷ್ಟು ನಷ್ಟವಾಗಿದೆ. ನೋಡು ಬಾ ನಮ್ಮೂರ ಯೋಜನೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ಸ್ಥಳಗಳನ್ನು ಬೆಳಕಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಚಿಕ್ಕಮಗಳೂರಿಗೆ ಈಶ್ವರಪ್ಪನವರು  ಬಂದಿರುವುದರ ಬಗ್ಗೆ ಮಾಹಿತಿ ಇಲ್ಲ, ಅಶೋಕ್‌ ಅವರು ಹಾಗೂ ಜಗದೀಶ್‌ ಶೆಟ್ಟರ್‌ ಅಧಿಕೃತವಾಗಿ ಚಿಕ್ಕಮಗಳೂರಿಗೆ ಬಂದಿದ್ದು ನಿಜ.

ಆದರೆ ಯಾವುದೇ ಸಭೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಉಪ ವಿಭಾಗಾಧಿಕಾರಿ ಗಿರೀಶ್‌ ನಂದನ್‌,  ತಹ ಶೀಲ್ದಾರ್‌ ಮಂಜುನಾಥ್‌, ಇಒ ಹರೀಶ್‌, ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್‌ ಸಂ , ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಿತೇಂದ್ರ, ಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next