Advertisement

ಗಾಂಧಿ ಕುಟುಂಬದ ನಿಕಟವರ್ತಿ ಧವನ್‌ ನಿಧನ

10:10 AM Aug 07, 2018 | Team Udayavani |

ನವದೆಹಲಿ: ರಾಜೀವ್‌ ಗಾಂಧಿ ಕುಟುಂಬದ ನಿಕಟವರ್ತಿ, ಮಾಜಿ ಸಂಸದ ರಾಜೇಂದ್ರ ಕುಮಾರ್‌ ಧವನ್‌ (ಆರ್‌.ಕೆ.ಧವನ್‌) (81) ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸಹಾಯಕರಾಗಿ ಧವನ್‌ ವೃತ್ತಿ ಆರಂಭಿಸಿದ್ದರು. 1975-1977ರ ಅವಧಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದಾಗ ಇಂದಿರಾ ಅವರ ಆತ್ಮೀಯ ವಲಯದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡರು.

Advertisement

1962ರಿಂದ 1982ರ ವರೆಗೆ ಇಂದಿರಾರ ಆಪ್ತ ವಲಯ ದಲ್ಲಿದ್ದರು. ಮಾಜಿ ಸಚಿವರಾದ ಅಂಬಿಕಾ ಸೋನಿ, ಕಮಲ್‌ನಾಥ್‌ರಂತೆ ಅವರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇಂದಿರಾ ಹತ್ಯೆ ಪ್ರಕರಣದ ಸಂದರ್ಭದಲ್ಲಿ ಅವರು ಸಾಕ್ಷಿ ಯಾಗಿದ್ದರು ಎಂದು ಹೇಳಲಾಗಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ಅನೇಕ ಗಣ್ಯರು ಧವನ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next