Advertisement
.ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿ¨ªಾರೆ. ಇದರ ಪರಿಣಾಮವಾಗಿ ಆರೋಗ್ಯ ಏರುಪೇರಾಗುತ್ತದೆ. ಶರೀರಕ್ಕೆ ಪೋಷಕಾಂಶಗಳು ಸೇರ್ಪಡೆಯಾಗುವುದಿಲ್ಲ. ಆದರೆ, ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.
Related Articles
Advertisement
.ಜ್ಯೂಸ್ ಯಾವ ಬಣ್ಣದಿಂದಿರುತ್ತದೋ ಅದಕ್ಕೆ ಹೊಂದುವಂಥ ಅಥವಾ ಅದಕ್ಕೆ ವಿರುದ್ಧ ಬಣ್ಣದ ಟ್ರೇಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಅತಿಥಿಗಳು ನಿಮ್ಮ ಕಲಾತ್ಮಕತೆಯನ್ನು ಹಾಗೂ ಜಾಣ್ಮೆಯನ್ನು ಮೆಚ್ಚಿ ಹೊಗಳದಿದ್ದರೆ ಕೇಳಿ!
.ತೆಂಗಿನಕಾಯಿ ಕೆಡದಂತೆ ಇಡಬೇಕಾದರೆ ಅದರ ಕಣ್ಣು ಇರುವ ಭಾಗದಲ್ಲಿ ಜುಟ್ಟು ಇಟ್ಟು ಸುಲಿಯಬೇಕು. ಅಂದರೆ ಕಲಶದಲ್ಲಿ ಇಡುವ ಕಾಯಿಯಂತೆ ಇದ್ದರೆ ಅಷ್ಟು ಬೇಗ ಹಾಳಾಗುವುದಿಲ್ಲ. ಖರೀದಿಸುವಾಗ ನೀರಾಡುವ ಕಾಯಿಯನ್ನು ಖರೀದಿಸಿ. ಇಬ್ಭಾಗ ಆದ ತೆಂಗಿನಕಾಯಿಯನ್ನು ಉಪ್ಪಿನ ಭರಣಿಯಲ್ಲಿಟ್ಟರೆ ಹಾಳಾಗುವುದಿಲ್ಲ. ಬಾಲ್ದಿಯಲ್ಲಿ ನೀರು ಹಾಕಿ ಅದರೊಳಗೆ ಹಾಕಿದರೂ ಕೆಡುವುದಿಲ್ಲ.
.ಉಗುರಿನ ಸುತ್ತಲಿನ ಚರ್ಮ ಕಪ್ಪು ಬಣ್ಣಕ್ಕೆ ತಿರುಗಿದ್ದು, ಉಗುರು ಕಾಂತಿಹೀನವಾಗಿದ್ದರೆ, ನಿಂಬೆಹಣ್ಣಿನ ರಸಕ್ಕೆ ಅಡುಗೆಸೋಡಾ ಬೆರೆಸಿ ಹತ್ತಿಯ ಉಂಡೆಯನ್ನು ಅದ್ದಿ ತಿಕ್ಕಬೇಕು. ಇದರಿಂದ ಕ್ರಮೇಣ ಚರ್ಮದ ಕಪ್ಪು ಬಣ್ಣ ತಿಳಿಯಾಗುತ್ತದೆ ಹಾಗೂ ಉಗುರಿನ ಹೊಳಪು ಹೆಚ್ಚುತ್ತದೆ.
.ಜೇನುತುಪ್ಪ ಶುದ್ಧವೋ ಅಥವಾ ಕಲಬೆರಕೆಯಿಂದ ಕೂಡಿದೆಯೋ ಎಂದು ಅರಿಯುವ ಸುಲಭ ಉಪಾಯ ಇಂತಿದೆ. ಜೇನುತುಪ್ಪದಲ್ಲಿ ಒಂದು ಚಮಚವನ್ನು ಅದ್ದಿ ಬಳಿಕ ಕೇವಲ ನೀರಿನಿಂದ ತೊಳೆಯಬೇಕು. ಶುದ್ಧ ಜೇನಾದರೆ ಚಮಚ ಕೂಡಲೇ ಸ್ವತ್ಛವಾಗುತ್ತದೆ. ಬೆಲ್ಲದ ಪಾಕ ಮುಂತಾದವುಗಳಿಂದ ಮಿಶ್ರಿತವಾಗಿದ್ದ ಜೇನಾಗಿದ್ದರೆ, ಚಮಚ ಜಿಗುಟಾಗಿರುತ್ತದೆ.
– ಎಸ್‌ಎನ್