Advertisement
ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು ಯೋಚಿಸಲು ಹೇಳಿ. ಈಗ ನೀವು ಗಡಿಯಾರದ ಮೇಲಿನ ಸಂಖ್ಯೆಗಳನ್ನು ನಿಮ್ಮ ಪೆನ್ನಿನಿಂದ ಮುಟ್ಟುತ್ತಾ ಹೋಗಬೇಕು. ಒಂದೊಂದು ಬಾರಿ ಒಂದೊಂದು ಸಂಖ್ಯೆ ಮುಟ್ಟಿದಾಗಲೂ ಸಭಿಕ ತಾನು ಮನಸ್ಸಿನಲ್ಲಿ ಇಟ್ಟುಕೊಂಡಿರುವ ಸಂಖ್ಯೆಗೆ ಒಂದೊಂದು ಅಂಕಿ ಸೇರಿಸುತ್ತಾ ಹೋಗಬೇಕು. ಅದರ ಒಟ್ಟು ಮೊತ್ತ 20 ಆದಾಗ ನಿಲ್ಲಿಸಿ’ ಎಂದು ಆತ ಹೇಳಬೇಕು. ಆಗ ನಿಮ್ಮ ಪೆನ್ನು ಯಾವ ಸಂಖ್ಯೆಯ ಮೇಲೆ ಇರುವುದೋ ಅದೇ ಆತ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಸಂಖ್ಯೆ.
ನೀವು ಮೊದಲ ಏಳು ಬಾರಿ ನಿಮಗಿಷ್ಟ ಬಂದ ಸಂಖ್ಯೆಯ ಮೇಲೆ ಕುಟ್ಟಬಹುದು. ಎಂಟನೆಯ ಬಾರಿ ಮಾತ್ರ 12ನೆಯ ಸಂಖ್ಯೆಯ ಮೇಲೆ ಕುಟ್ಟಿ ನಂತರ ಅಪ್ರದಕ್ಷಿಣೆಯಲ್ಲಿ (anti clockwise) ಒಂದೊಂದಾಗಿ ಸಂಖ್ಯೆಗಳನ್ನು ಮುಟ್ಟುತ್ತಾ ಬನ್ನಿ. ಆತ ನಿಲ್ಲಿಸಿ’ ಎಂದಾಗ ನಿಮ್ಮ ಪೆನ್ನು ಯಾವ ಸಂಖ್ಯೆಯ ಮೇಲಿರುವುದೋ ಅದೇ ಆತನ ಮನಸ್ಸಿನಲ್ಲಿನ ಸಂಖ್ಯೆ. ನಿರೂಪಣೆ: ಉದಯ್ ಜಾದೂಗಾರ್