Advertisement
ಹಸುರು ಮನೆ ಅನೀಲದಿಂದ ಇಂದು ವಾತಾವರಣದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಧ್ರುವಿಯ ಮಂಜಿನ ಪರ್ವತಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿದ್ದು, ಮುಂಬರುವ ಕಂಟಕವನ್ನು ತೊರುತ್ತಿದೆ. ಹವಾಮಾನ ಬದಲಾವಣೆ ಕುರಿತು ನೂರಾರು ಎನ್‌ಜಿಒಗಳು, ಅಕಾಡೆಮಿಗಳು ಸಾಮಾಜಿಕ ಜಾಲತಾಣ ಚಳವಳಿ ಮೂಲಕ ಕಾಳಜಿ ಮೂಡಿಸುತ್ತಿವೆ. ಇದರಲ್ಲಿ ಫಿಲ್ಮ್ ಮೇಕಿಂಗ್‌ನ ಕೊಡುಗೆ ಅಪಾರವಾಗಿದೆ. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಅನೇಕ ಕಿರುಚಿತ್ರಗಳು, ಡಾಕ್ಯುಮೆಂಟರಿಗಳು ತಯಾರಾದವು. ಅವುಗಳಲ್ಲಿ ಕೆಲವೊಂದು ಉತ್ತಮ ಡಾಕ್ಯುಮೆಂಟರಿಗಳನ್ನು ಆಯ್ದು ಇಲ್ಲಿ ನೀಡಿದ್ದೇವೆ.
ವಿಜಯ್ ಎಸ್ ಜೊಧಾ ನಿರ್ದೇಶನದ ಈ ಕಿರುಚಿತ್ರ ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿ ಬೇಳೆಯುವ ಸೇಬಿನ ಕೃಷಿಯಮೇಲೆ ಬೆಳಕು ಚೆಲ್ಲುತ್ತದೆ. ಇದರ ಉತ್ತಮ ಛಾಯಾಗ್ರಹಣ ಮತ್ತು ಚಿತ್ರಕಥೆಯ ಮೂಲಕ ಹವಾಮಾನ ಬದಲಾವಣೆಯಂತ ಸಂಕೀರ್ಣ ಸಮಸ್ಯೆ ಮತ್ತು ಅದರಿಂದ ಸೇಬಿನ ಬೆಳೆಯ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಇಲ್ಲಿ ಬಿಂಬಿಸಲಾಗಿದೆ. ಕ್ಲೈಮೇಟ್ಸ್ ಫಸ್ಟ್ ಆರ್ಫನ್
ಇದು ಒರಿಸ್ಸಾದ ಕೆಂದ್ರಪರ ಜಿಲ್ಲೆಯ ಸತಭಯ ಎನ್ನುವ ಹಳ್ಳಿಯಮೇಲೆ ಹವಾಮಾನ ಬದಲಾವಣೆಯಿಂದ ಉಂಟಾದ ಪರಿಣಾಮದ ಗಂಭೀರತೆಯ ಬಗ್ಗೆ ತಿಳಿಸುತ್ತದೆ. ನೀಲಾ ಮಧಾಬ್ ಪಾಂಡಾ ಅವರಿಂದ ನಿರ್ದೇಶಿಸಲ್ಪಟ್ಟಿದ್ದು, ಇದು ಅಲ್ಲಿನ ಸ್ಥಳೀಯ ನಿರಾಶ್ರಿತರಿಂದಾದ ಭೂ ಒತ್ತುವರಿ ಮತ್ತು ಅನಂತರ ಕರವಾಳಿಯುದ್ದಕ್ಕೂ ಆಗುತ್ತಿರವ ಕೃಷಿ ವಿನಾಶದ ಬಗ್ಗೆ ಹೇಳುತ್ತದೆ.
Related Articles
ಈ ಕಿರುಚಿತ್ರ ಒಂದು ಮೈಲುಗಲ್ಲು ಎಂದೇ ಹೇಳಬಹುದು. ಮೈಕ್ ಪಾಂಡೇ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಾಡ್ ಲೀವರ್ ಎಣ್ಣೆಯ ಸಲುವಾಗಿ ತಿಮಿಂಗಲು ಮತ್ತು ಶಾರ್ಕ್‌ಗಳನ್ನು ಅನವಶ್ಯವಾಗಿ ಕೊಲ್ಲುತ್ತಿರುವುದರ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಚಿತ್ರಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ “ಗ್ರೀನ್ ಆಸ್ಕ್ರ್’ ಪ್ರಶಸ್ತಿ ಕೂಡ ಸಂದಿದೆ. ಅಲ್ಲದೇ ಜಗತ್ತಿನಾದ್ಯಂತ ಅನೇಕ ಕಾನೂನಾತ್ಮಕ ಬದಲಾವಣೆ ಮತ್ತು ಈ ಸಂತತಿಗಳನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
Advertisement
ಭಾರತ ಸರಕಾರವೂ ಕಾನೂನು ತಿದ್ದುಪಡಿಯ ಮೂಲಕ ತಿಮಿಂಗಲು ಮತ್ತು ಶಾರ್ಕ್‌ಗಳು ಅಳಿವಿಂಚಿನಲ್ಲಿರುವ ಜೀವಿಗಳು, 1972ರ ವನ್ಯಜೀವಿ ಕಾಯ್ದೆ ಪ್ರಕಾರ ಇವುಗಳನ್ನು ಹಿಡಿಯುವದು ಕಾನೂನು ಬಾಹೀರ ಎಂದು ಘೋಷಿಸಿದೆ.
ಎ ಗ್ರೀನ್ ಅಗೊನಿ (A Green Agony)ಕೊಲ್ಲಿಗಳು ಮತ್ತು ಜಲಮೂಲಗಳಿಂದ ಕೂಡಿರುವ ಸುಂದರ್‌ಬನ್ಸ್ ಅರಣ್ಯ ಭಾರತದ ಅತ್ಯಂತ ಶ್ರೀಮಂತ ಜೀವ ವೈವಿಧ್ಯ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಸುಂದರ್‌ಬನ್ಸ್ ಅರಣ್ಯದಲ್ಲಿ ವಾಸಿಸುತ್ತಿರುವ ಜೀವಿ ಪ್ರಪಂಚದ ಮೇಲೆ ಹವಾಮಾನ ಬದಲಾವಣೆ ಬೀರಿರುವ ದುಷ್ಪರಿಣಾಮವನ್ನು ಇದು ಬಂಬಿಸಿದೆ. ಮಾನವ ಅನಗತ್ಯ ಚಟುವಟಿಕೆಗಳ ದೆಸೆಯಿಂದ ಭೂಮಿ ಮೆಲಾಗುತ್ತಿರುವ ಹೊರೆಯನ್ನು ಗಿತಾ ಸಿಂಗ್ ಅವರು ರಾಯಲ್ ಬೆಂಗಾಲ್ ಹುಲಿಯನ್ನು ಕಥಾವಸ್ತುವನ್ನಾಗಿ ಇಟ್ಟುಕೋಂಡು ಅತ್ಯಂತ ಮಾರ್ಮಿಕವಾಗಿ ತೊರಿಸಿದ್ದಾರೆ. ಎ ಡ್ರೆಡ್‌ಫುಲ್ ಫೇಟ್ (A Dreadful Fate)
ಡೂಲಂ ಸತ್ಯನಾರಾಯಣ ಅವರ ನಿರ್ದೇಶನವಿರುವ ಈ ಕಿರುಚಿತ್ರ ಅಂತರ್ಜಲ ಸಂಪನ್ಮೂಲದ ಮಾಲಿನ್ಯದಿಂದ ಆಗುತ್ತಿರುವ ಗಂಭಿರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರ ಸಂಪೂರ್ಣವಾಗಿ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಚಿತ್ರಿಕರಣಗೊಂಡಿದೆ. ಈ ಪ್ರದೇಶದ ಅಂತರ್ಜಲದಲ್ಲಿ ಹೆಚ್ಚುವರಿ ಪ್ಲೋರೈಡ್ ಅಂಶವಿದ್ದು , ಇದು ಮೂಳೆಗಳ ವಿರೂಪಕ್ಕೆ ಕಾರಣವಾಗುವ ಭಯಾನಕ ರೋಗ ಪ್ಲೋರಿಶಷ್‌ಗೆ ಎಡೆಮಾಡಿಕೊಡುತ್ತದೆ. ಸಾಕ್ಷ್ಯ ಚಿತ್ರಗಳಲ್ಲಿ ತೋರಿಸುವ ದೃಶ್ಯಗಳು ನೋಡುಗರ ಕಣ್ಣಂಚನ್ನು ಒದ್ದೆ ಮಾಡುತ್ತವೆ. ಈ ಪ್ರದೇಶದ ಜನರೂ ಇಂದಿಗೂ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. -ಶಿವಾನಂದ ಎಚ್