Advertisement

Climate Change: ಅಡಿಕೆ ಕೊಳೆರೋಗ ತಡೆಗೆ 50 ಕೋ.ರೂ. ನೀಡಿ: ಐವನ್‌ ಡಿ’ಸೋಜಾ

12:12 AM Jul 25, 2024 | Team Udayavani |

ಬೆಂಗಳೂರು: ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಿಸಲು ರೈತರಿಗೆ ಕನಿಷ್ಠ 50 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್‌ನ ಐವನ್‌ ಡಿ’ಸೋಜಾ ಸರಕಾರವನ್ನು ಆಗ್ರಹಿಸಿದರು.

Advertisement

“ಅಡಿಕೆ ಕೃಷಿಕರಿಗೆ ಈ ಬಾರಿ ಮತ್ತೆ ಕೊಳೆರೋಗ ಭೀತಿ’ ಎಂದು ಜುಲೈ 21ರಂದು ಉದಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರಸ್ತಾವಿಸಿ ಸರಕಾರದ ಗಮನ ಸೆಳೆದರು. ಈ ಬಾರಿಯ ಹವಾಮಾನ ಬದಲಾವಣೆಯಂತಹ ಕಾರಣಗಳಿಂದಾಗಿ ಕೊಳೆ ರೋಗವಲ್ಲದೆ ಅಡಿಕೆ ನಳ್ಳಿ ಹಂತದಲ್ಲೇ ಉದುರತೊಡಗಿರುವುದು ಕಳವಳ ಸೃಷ್ಟಿಸಿದೆ.

ದ.ಕ. ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು ಹಾಗೂ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಅಲ್ಲದೆ ಇತರ ಭಾಗದ ರೈತರು ಹವಾಮಾನ ಬದಲಾವಣೆಯಿಂದಾಗಿ ಆಗಿರುವ ಈ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೋಟಗಾರಿಕೆ ಇಲಾಖೆ ಮಾತ್ರವಲ್ಲ ಸರಕಾರ ಕೂಡ ಕೊಳೆರೋಗ ನಿಯಂತ್ರಿಸಲು ರೈತರಿಗೆ ಕನಿಷ್ಠ 50 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಎನ್‌.ಎಸ್‌. ಬೋಸರಾಜ್‌ ಹೇಳಿದರು.

ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ಅಗತ್ಯ: ಶಾಸಕ ಡಾ. ಭರತ್‌ ಶೆಟ್ಟಿ
ಬೆಂಗಳೂರು: ಒಂದು ಕಡೆ ಸಮುದ್ರ, ಇನ್ನೊಂದೆಡೆ ಪಶ್ಚಿಮ ಘಟ್ಟದ ನಡುವೆ ಇರುವ ಸುಂದರ ನೈಸರ್ಗಿಕ ತಾಣ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮದಲ್ಲಿ ಹಿಂದುಳಿದಿದ್ದು ಸರಕಾರ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಿದಲ್ಲಿ ಚಿತ್ರಣವೇ ಬದಲಾಗಲಿದೆ. ಈ ಬಗ್ಗೆ ಗಂಭೀರ ಚಿಂತನೆ ಆಗತ್ಯವಿದೆ ಎಂದು ಶಾಸಕ ಡಾ. ಭರತ್‌ ಶೆಟ್ಟಿ ವೈ ವಿಧಾನ ಸಭೆಯಲ್ಲಿ ಮನವಿ ಮಾಡಿದರು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕಿದೆ. ಇದರಿಂದ ಉದ್ಯೋಗಾವಕಾಶ, ಸ್ವಾವಲಂಬಿ ಜೀವನ ಸಾಧ್ಯ ಎಂದ ಅವರು ಅಭಿವೃದ್ಧಿಗೆ ಅವಕಾಶ ಕಲ್ಪಿಸಿ, ಟೆಂಪಲ್‌ ಟೂರಿಸಂ, ಬೀಚ್‌ ಸೈಡ್‌ ಅಭಿವೃದ್ಧಿ ಎಲ್ಲದಕ್ಕೂ ಉತ್ತೇಜನ ಅಗತ್ಯ ನೀಡಬೇಕಾಗಿದೆ ಎಂದರು.

Advertisement

ಪ್ರಶ್ನೋತ್ತರ ಕಲಾಪ ಸಂದರ್ಭ ಈ ವಿಚಾರ ಪ್ರಸ್ತಾವಿಸಿದ ಅವರು, ದ.ಕ.ಜಿಲ್ಲೆಯಲ್ಲಿ ಇದುವರೆಗೆ 37 ಪ್ರವಾಸೋದ್ಯಮ ತಾಣಗಳನ್ನು ಗುರುತಿಸಲಾಗಿದೆ. ಆದರೆ ವಾಸ್ತವದಲ್ಲಿ ಅದಕ್ಕಿಂತ ಹೆಚ್ಚು ಸ್ಥಳಗಳಿವೆ. ಪ್ರವಾಸೋದ್ಯಮ ಹಾಗೂ ಉದ್ಯೋಗ ಸೃಷ್ಟಿಯಿಂದ ಇನ್ನಷ್ಟು ಯೋಜನೆಗಳನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next