Advertisement

Click Movie Review; ಹೆತ್ತವರಿಗೆ ಕ್ವಿಕ್‌ ಸಂದೇಶ ನೀಡುವ ಕ್ಲಿಕ್‌

12:43 PM Feb 03, 2024 | Team Udayavani |

ತಮ್ಮ ಮಕ್ಕಳನ್ನು ಭವಿಷ್ಯದಲ್ಲಿ ತಮ್ಮ ಆಸೆಯಂತೆ ಬೆಳೆಸಬೇಕು. ಅದರಲ್ಲೂ ಅವರನ್ನು ಡಾಕ್ಟರ್‌, ಎಂಜಿನಿಯರ್‌, ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ಬಹುತೇಕ ಹೆತ್ತವರ ಹೆಬ್ಬಯಕೆಯಾಗಿರುತ್ತದೆ. ಆದರೆ ಮುಗ್ಧ ಮಕ್ಕಳ ಮನದಲ್ಲೇನಿದೆ, ಅವರ ಇಷ್ಟ-ಕಷ್ಟಗಳೇನು, ಅವರ ಆಸೆ-ಆಕಾಂಕ್ಷೆಗಳೇನು ಎಂಬುದನ್ನು ಅರಿಯುವ ವ್ಯವದಾನ ಬಹುತೇಕ ಹೆತ್ತವರಿಗೆ ಇರುವುದಿಲ್ಲ. ಮಕ್ಕಳ ವಿಷಯದಲ್ಲಿ ದೊಡ್ಡವರು ಮಾಡುವ ಈ ತಪ್ಪು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಿರುವ ಸಿನಿಮಾ “ಕ್ಲಿಕ್‌’ ಈ ವಾರ ತೆರೆಗೆ ಬಂದಿದೆ.

Advertisement

ಬಾಲಕ ಸಮರ್ಥನಿಗೆ ಫೋಟೋಗ್ರಫಿ, ಕ್ಯಾಮೆರಾ ಬಗ್ಗೆಯೇ ಹೆಚ್ಚು ಆಸಕ್ತಿ. ಆದರೆ ಮಗನ ಆಸಕ್ತಿಗೆ ಗಮನ ಕೊಡದ ಆತನ ಪೋಷಕರು ಓದುವಂತೆ ಒತ್ತಡ ಹೇರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಬಾಲಕ ಸಮರ್ಥ ಒಂದು ದಿನ ರಾತ್ರಿ ಯಾರಿಗೂ ಹೇಳದಂತೆ ಮನೆಬಿಟ್ಟು ಹೊರಡುತ್ತಾನೆ. ಹೀಗೆ ಮನೆಬಿಟ್ಟು ದೂರ ಹೋಗುವ ಸಮರ್ಥನ ಜೀವನ ಮುಂದೇನಾಗುತ್ತದೆ ಎಂಬುದೇ “ಕ್ಲಿಕ್‌’ ಕಥಾಹಂದರ ಅದು ಹೇಗಿರುತ್ತದೆ ಎಂಬುದನ್ನು ತಿಳಿಯಬೇಕಾದರೆ, “ಕ್ಲಿಕ್‌’ ಕಡೆಗೆ ಮುಖ ಮಾಡಬಹುದು.

ಪವನ್‌ ಮುಖ್ಯ ಪಾತ್ರದಲ್ಲಿ ತನ್ನ ಪಾತ್ರಕ್ಕೆ ತಕ್ಕಂತೆ ಉತ್ತಮ ಅಭಿನಯ ನೀಡಿದ್ದಾರೆ. ತನ್ನ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಸಿಲ್ಲಿಲಲ್ಲಿ ಆನಂದ್‌, ಸುಮನಾ ಶಶಿ, ರಚನಾ ದಶರಥ್‌, ಚಂದ್ರಕಲಾ ಮೋಹನ್‌ ಮತ್ತಿತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಥೆಯ ನಿರೂಪಣೆ, ಛಾಯಾಗ್ರಹಣ, ಸಂಗೀತ ಸಿನಿಮಾದಲ್ಲಿ ಗಮನ ಸೆಳೆಯುತ್ತದೆ. ಸಂದೇಶವನ್ನು ಹೊತ್ತ “ಕ್ಲಿಕ್‌’ ಅನ್ನು ಒಮ್ಮೆ ನೋಡಿ ಬರಬಹುದು

Advertisement

Udayavani is now on Telegram. Click here to join our channel and stay updated with the latest news.

Next