Advertisement

ಮೊಬೈಲ್‌ನಲ್ಲಿ ಮಾತಾಡುವ ಬಸ್‌ ಡ್ರೈವರ್‌ ಪೋಟೋ ತೆಗೆದವರಿಗೆ ಇನಾಮು !

11:55 AM Jun 14, 2017 | Team Udayavani |

ಲಕ್ನೋ : ಸಾರ್ವಜನಿಕ ಪ್ರಯಾಣದ ಬಸ್ಸುಗಳ ಚಾಲಕರು ವಾಹನವನ್ನು ಚಲಾಯಿಸುವಾಗ ಮೊಬೈಲ್‌ ನಲ್ಲಿ ಮಾತನಾಡುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಆದರೆ ಉತ್ತರ ಪ್ರದೇಶದಲ್ಲಿ  ರಾಜ್ಯ ಸಾರಿಗೆ ಬಸ್‌ ಚಾಲಕರು ಇನ್ನು ಹಾಗೆ ಮಾಡುವಂತಿಲ್ಲ. ಏಕೆಂದರೆ ಬಸ್‌ ಚಲಾಯಿಸುವಾಗ ಮೊಬೈಲ್‌ನಲ್ಲಿ ಡ್ರೈವರ್‌ ಮಾತನಾಡುವುದನ್ನು ಫೋಟೋ ತೆಗೆದು ವಾಟ್ಸಾಪ್‌ನಲ್ಲಿ ಕಳುಹಿಸುವವರಿಗೆ ಉತ್ತರ ಪ್ರದೇಶ ಸರಕಾರ ಇನಾಮು ನೀಡಲು ಮುಂದಾಗಿದೆ. ಅಂತೆಯೇ ತಪ್ಪುಗಾರ ಚಾಲಕನಿಗೆ ಭಾರೀ ದಂಡವನ್ನೂ ಹೇರಲು ಆರಂಭಿಸಿದೆ.

Advertisement

“ಬಸ್ಸು ಚಲಾಯಿಸುವಾಗ ಚಾಲಕರು ಮೊಬೈಲ್‌ನಲ್ಲಿ ಮಾತನಾಡಬಾರದು ಎಂಬ ಬಗ್ಗೆ  ಸಾಕಷ್ಟು ನಿಯಮಗಳು, ನಿರ್ಬಂಧಗಳು ಇವೆ. ಹಾಗಿದ್ದರೂ ನಮಗೆ ಪ್ರಯಾಣಿಕರಿಂದ ತಪ್ಪುಗಾರ ಚಾಲಕರ ಬಗ್ಗೆ ರಾಶಿ ರಾಶಿ ದೂರುಗಳು ಬರುತ್ತಲೇ ಇವೆ. ತಪ್ಪುಗಾರ ಡ್ರೈವರ್‌ಗೆ ಶಿಕ್ಷೆ ನೀಡಲು ನಾವೀಗ ಪ್ರಯಾಣಿಕರ ನೆರವನು ಕೋರಿದ್ದೇವೆ; ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವ ಡ್ರೈವರ್‌ನ ಫೋಟೋ ತೆಗೆದು ವಾಟ್ಸಾಪ್‌ನಲ್ಲಿ  ಕಳುಹಿಸಿ ಇನಾಮು ಪಡೆಯಿರಿ ಎಂದು ಅವರಿಗೆ ಹೇಳಿದ್ದೇವೆ’ ಎಂದು ಉತ್ತರ ಪ್ರದೇಶದ ಸಾರಿಗೆ ಸಚಿವ ಸ್ವತಂತ್ರ ದೇವ್‌ ಸಿಂಗ್‌ ಹೇಳಿದ್ದಾರೆ. 

ಮೋಟಾರು ವಾಹನ ಕಾಯಿದೆಯ ಪ್ರಕಾರ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವ ಚಾಲಕನಿಗೆ ಆರು ತಿಂಗಳ ಜೈಲು ಮತ್ತು 1,000 ರೂ. ದಂಡ ಹೇರುವುದಕ್ಕೆ ಅವಕಾಶವಿದೆ. 

ಉತ್ತರ ಪ್ರದೇಶ ಸರಕಾರದ ಈ ವಿನೂತನ ಕ್ರಮವನ್ನು ರಾಜ್ಯಾದ್ಯಂತದ ಬಸ್‌ ಪ್ರಯಾಣಿಕರು ಸ್ವಾಗತಿಸಿದ್ದಾರೆ. ಅಂತೆಯà ಮೊಬೈಲ್‌ನಲ್ಲಿ  ಮಾತನಾಡುತ್ತಾ ವಾಹನ ಚಲಾಯಿಸುವವರ ಸಂಖ್ಯೆ ಬಹಳ ಬೇಗನೆ ಕಡಿಮೆಯಾಗುವುದು ನಿಶ್ಚಿತ ಎಂಬ ವಿಶ್ವಾಸವನ್ನು ರಾಜ್ಯ ಸಾರಿಗೆ ಸಚಿವ ಸ್ವತಂತ್ರ ದೇವ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next