ಬೆಂಗಳೂರು: ಲಾಕ್‌ಡೌನ್ ಜಾರಿಯಿಂದ ಪರಿಣಾಮಕಾರಿಫಲಿತಾಂಶ ಬಂದಿದ್ದು, ಸೋಂಕು ನಿಯಂತ್ರಣಕ್ಕೆ ಬಂದಿದೆ.ಹಾಗಂತ, ಒಮ್ಮೆಲೆ ಲಾಕ್‌ಡೌನ್ ತೆರವುಗೊಳಿಸದೆ,ಹಂತ-ಹಂತವಾಗಿ ಅನ್‌ಲಾಕ್ ಮಾಡುವುದು ಸೂಕ್ತ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಮಂಗಳವಾರ ಶಾಂತಿನಗರ ಬಿಎಂಟಿಸಿ ಘಟಕ ಎರಡರಲ್ಲಿಸಾರಿಗೆ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸೋಂಕು ಪ್ರಕರಣ 5-7 ಸಾವಿರಕ್ಕೆ ಇಳಿಕೆಯಾಗುವ ವರೆಗೆಲಾಕ್‌ಡೌನ್ ಮುಂದುವರಿಸುವಂತೆ ತಜ್ಞರು ವರದಿಯಲ್ಲಿ ಹೇಳಿದ್ದಾರೆ.
ಸದ್ಯ ಅಂಕಿ-ಅಂಶಗಳನ್ನು ನೋಡಿದಾಗ ಜೂನ್7ರ ವೇಳೆಗೆ ಸೋಂಕು ಪ್ರಕರಣಗಳು ಮತ್ತಷ್ಟುಇಳಿಕೆಯಾಗುವ ನಿರೀಕ್ಷೆಯಿದೆ. ಅನ್‌ಲಾಕ್ ಆದ ಬಳಿಕಬಸ್ ಸಂಚಾರಪುನರಾರಂಭವಾಗಲಿದೆ. ಹೀಗಾಗಿಚಾಲಕರುಮತ್ತು ನಿರ್ವಾಹಕರಿಗೆ ಸೋಂಕು ತಗುಲದಂತೆ ಆದ್ಯತೆಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಜೂನ್ 7ರ ಬಳಿಕ, ಅನ್‌ಲಾಕ್ ಅಥವಾ ಲಾಕ್‌ಡೌನ್‌ಕುರಿತು ಚರ್ಚಿಸಲು ಸಿಎಂ ಬುಧವಾರ (ಜೂ.2) ಸಭೆಕರೆದಿದ್ದಾರೆ. ತಜ್ಞರ ವರದಿಯನ್ನೂ ಗಣನೆಗೆ ತೆಗೆದುಕೊಂಡುಅಂತಿಮ ನಿರ್ಧಾರಕೈಗೊಳ್ಳಲಿದ್ದಾರೆ ಎಂದರು.
ಬಿಎಂಟಿಸಿಯಲ್ಲಿ 31 ಸಾವಿರ ನೌಕರರಿದ್ದು, ಎಲ್ಲರಿಗೂಲಸಿಕೆ ನೀಡುತ್ತೇವೆ. ಎರಡನೇ ಡೋಸ್ ಪಡೆದ ಚಾಲನಾಸಿಬ್ಬಂದಿಯನ್ನು ಮಾತ್ರ ಅನ್‌ಲಾಕ್ ಬಳಿಕ ಕರ್ತವ್ಯಕ್ಕೆನಿಯೋಜಿಸಲು ತೀರ್ಮಾನಿಸಲಾಗಿದೆ. ಈಗಾಗಲೇಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಶೇ. 70ನೌಕರರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 2ನೇಡೋಸ್ ಪ್ರಾರಂಭಿಸಲಾಗಿದೆ ಎಂದರು.