Advertisement

ಪರವಾನಗಿ ಇಲ್ಲದೇ ಸ್ಲ್ಯಾಬ್‌ ತೆರವು-ಪರಿಶೀಲನೆ

04:49 PM Sep 29, 2022 | Team Udayavani |

ಕುಷ್ಟಗಿ: ಪಟ್ಟಣದ ವಾರ್ಡ್‌ ನಂ. 7ರಲ್ಲಿರುವ ಬೀಬೀ ಪಾತೀಮಾ ಶಾದಿ ಮಹಲ್‌ ಪಕ್ಕದ ಭೋಜನಾಲಯ ಮೇಲ್ಛಾವಣೆ ಕಾಂಕ್ರೀಟ್‌ ಸ್ಲ್ಯಾಬ್‌ನ್ನು ವಕ್ಫ್ ಬೋರ್ಡ್‌ ಅನುಮತಿ ಇಲ್ಲದೇ ತೆರವುಗೊಳಿಸಿದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

Advertisement

ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಬೋರ್ಡ್‌ ಪ್ರಧಾನ ಕಾರ್ಯದರ್ಶಿಗೆ ಸ್ಥಳೀಯರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್‌ ಅಧಿಕಾರಿ ರಹೀಮತ್‌ವುಲ್ಲ ಪೆಂಡಾರಿ ಭೇಟಿ ನೀಡಿ ಪರಿಶೀಲಿಸಿದರು.

ಶಾದಿ ಮಹಲ್‌ ಕಟ್ಟಡ ಪಕ್ಕದ ಭೋಜನಾಲಯದಲ್ಲಿ ರಾಜಕಾಲುವೆಯ ಬಸಿ ನೀರು ನಿಂತು ನಿರುಪಯುಕ್ತವಾಗಿತ್ತು. ನೀರು ಎಷ್ಟೇ ತೆರವುಗೊಳಿಸಿದರು ಬಸಿ ನೀರು ಜಮೆಯಾಗಿದ್ದರಿಂದ ನಿರುಪಯುಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಶಾದಿಮಹಲ್‌ ಸಮಿತಿ ಅಧ್ಯಕ್ಷ ಶೇಖ ಜವ್ವಾದ್‌ ಹುಸೇನ್‌, ವಕ್ಫ್ ಬೋರ್ಡ್‌ ಜಿಲ್ಲಾ ಉಪಾಧ್ಯಕ್ಷ ಮುರ್ತುಜಾ ಪೇಂಟರ್‌ ಇವರು ಅನುಮತಿ ಇಲ್ಲದೇ ಮೇಲ್ಛಾವಣಿ ತೆರವುಗೊಳಿಸಿದ್ದರು. ಪರವಾನಗಿ ಇಲ್ಲದೇ ತೆರವುಗೊಳಿಸಿರುವ ಕ್ರಮ ಪ್ರಶ್ನಿಸಿ ಮಹಿಬೂಬುಅಲಿ ಸರಪಂಚ್‌ ವಕ್ಫ್ ಬೋರ್ಡ್‌ ಜಿಲ್ಲಾಧ್ಯಕ್ಷ, ಕೊಪ್ಪಳ ಜಿಪಂ ಸಿಇಒ ಫೌಜೀಯಾ ತರುನ್ನುಮ್‌ ಹಾಗೂ ವಕ್ಫ್ ಬೋರ್ಡ್‌ ಪ್ರಧಾನ ಕಾರ್ಯದರ್ಶಿ ಅಂಜುಂ ಫರ್ವೇಜ್‌ಗೆ ದೂರು ನೀಡಿದ್ದರು.

ಈ ದೂರಿನನ್ವಯ ವಕ್ಫ್ ಬೋರ್ಡ್‌ ಅಧಿಕಾರಿ ರಹಿಮತ್‌ವುಲ್ಲಾ ಪೆಂಡಾ ಹಾಗೂ ಎಂಜಿನಿಯರ್‌ ಇಫ್ತೇಕಾರ್‌ ಅಹ್ಮದ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಶಾದಿಮಹಲ್‌ ಕಟ್ಟಡದ ಬೋಜನಾಲಯದ ಮೇಲ್ಛಾವಣಿ ತೆರವುಗೊಳಿಸಿರುವ ವಿಚಾರ ಗಮನಕ್ಕೆ ತಂದಿಲ್ಲ. ಈ ಬಗ್ಗೆ ಸಿಎಂ ಅವರಿಗೂ ದೂರು ಸಲ್ಲಿಸಲಾಗಿತ್ತು. ಬಸಿ ನೀರು ಬರದಂತೆ ಪುರಸಭೆ ಮೂಲಕ ಸೂಕ್ತ ಕ್ರಮವಹಿಸಲು ಸೂಚಿಸಲಾಗಿತ್ತೇ ವಿನಃ ಭೋಜನಾಲಯದ ಸ್ಲ್ಯಾಬ್‌ ಕಾಂಕ್ರೀಟ್‌ ತೆರವುಗೊಳಿಸಲು ಸೂಚಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು, ಮೇಲಾಧಿಕಾರಿಗಳಿಗೆ ವಾಸ್ತವ ವರದಿ ಸಲ್ಲಿಸುವೆ.  –ರಹಿಮತ್‌ವುಲ್ಲಾ ಪೆಂಡಾರಿ ವಕ್ಫ್ ಬೋರ್ಡ್‌ ಅಧಿಕಾರಿ

ಏಕಾಏಕಿ ವಕ್ಫ್ ಬೋರ್ಡ್‌ ಆಸ್ತಿಗೆ ಧಕ್ಕೆ ತಂದಿರುವ ಶೇಖ ಜವ್ವಾದ ಹುಸೇನ್‌, ಮುರ್ತುಜಾ ಪೇಂಟರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುರ್ತುಜಾ ಪೇಂಟರ್‌ ರೌಡಿ ಶೀಟರ್‌ ಆಗಿದ್ದು, ಕೂಡಲೇ ವಕ್ಫ್ ಬೋರ್ಡ್‌ಗೆ ಅರ್ಹರಲ್ಲ, ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು.  –ಮಹಿಬೂಬುಅಲಿ ಸರಪಂಚ್‌ ದೂರುದಾರ

ಇನ್ನೋರ್ವ ಉಪಾಧ್ಯಕ್ಷ ಅಮೀನುದ್ದೀನ್‌ ಮುಲ್ಲಾ, ಸದಸ್ಯ ಸೈಯ್ಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ ಸೇರಿಕೊಂಡು ಈ ಕ್ರಮ ಕೈಗೊಂಡಿದ್ದೇ ತಪ್ಪಾಗಿದೆ. ಬಸಿ ನೀರು ತೆರವುಗೊಳಿಸಿ ಕೆಲವೇ ದಿನಗಳಲ್ಲಿ 8 ಅಡಿ ನೀರು ಬಂದಿದ್ದು, ಅದರಲ್ಲಿ ಜೀವಹಾನಿ ಸಂಭವಿಸಿದರೆ ಈ ಆರೋಪ ಮಾಡಿದವರೇ ಹೊಣೆಗಾರರು.  -ಮುರ್ತುಜಾ ಪೇಂಟರ್‌, ವಕ್ಫ್ ಬೋರ್ಡ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next