Advertisement

Roadside shop: ಪೊಲೀಸ್‌ ಭದ್ರತೆಯಲ್ಲಿ ರಸ್ತೆ ಬದಿ ಅಂಗಡಿಗಳ ತೆರವು

04:31 PM Sep 05, 2023 | Team Udayavani |

ದೊಡ್ಡಬಳ್ಳಾಪುರ: ಸಂಚಾರ ದಟ್ಟಣೆ, ಅಪಘಾತಗಳು ಹಾಗೂ ಪಾದಚಾರಿಗಳಿಗೆ ಆಗುತ್ತಿದ್ದ ತೊಂದರೆಗಳ ಹಿನ್ನೆಲೆಯಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವು ಮಾಡಬೇಕೆಂಬ ತೀವ್ರ ಒತ್ತಾಯಕ್ಕೆ ಮಣಿದ, ನಗರಸಭೆ ಹಾಗು ಪೊಲೀಸ್‌ ಇಲಾಖೆ ರಸ್ತೆ ಬದಿ ಅಂಗಡಿಗಳ ತೆರವಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ನಗರಸಭೆ ಪೌರಾಯುಕ್ತ ಪರಮೇಶ್‌ ನೇತೃತ್ವದಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ತೆರವು ಕಾಚರಣೆ ಆರಂಭಿಸಿರುವ ಅಧಿಕಾರಿಗಳು ಪ್ರವಾಸಿ ಮಂದಿರದವರೆಗೂ ತೆರವು ಕಾರ್ಯಾಚರಣೆ ನಡೆಸಲು ಮುಂದಾದರು. ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಪಂ ವ್ಯಾಪ್ತಿಯಲ್ಲಿ ಅಪಘಾತ ಸಂಖ್ಯೆ ಹೆಚ್ಚಳವಾಗಿ, ಸಾವು- ನೋವುಗಳು ತೀವ್ರವಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವು ಮಾಡಬೇಕೆಂಬ ಒತ್ತಾಯ ತೀವ್ರಗೊಂಡಿದ್ದು, ನ್ಯಾಯಾಧೀಶರಾದ ಸಂದೀಪ್‌ ಸಾಲಿಯಾನ ಅವರು ಆದೇಶ ನೀಡಿದ್ದರು. ಅದೇ ರೀತಿ ಕರವೇ ಪ್ರವೀಣ್‌ ಶೆಟ್ಟಿ ಬಣದ ಸದಸ್ಯರು ಅಧಿಕಾರಿಗಳ ಕರ್ತವ್ಯ ಲೋಪದ ಕುರಿತಂತೆ ಲೋಕಾಯುಕ್ತರಿಗೆ ದೂರು, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಮುಂದಾಗಿದ್ದರು.

ನಗರಸಭೆ ಪೌರಾಯುಕ್ತ ಕೆ.ಪರಮೇಶ್‌, ಎಇಇ ಪರಿಸರ ಈರಣ್ಣ ಸೇರಿದಂತೆ ನಗರ ಠಾಣೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next