Advertisement

ಶಿರ್ವ: ಸರಕಾರಿ ಜಾಗದಲ್ಲಿದ್ದ ಅಕ್ರಮ ನಿರ್ಮಾಣದ ಕಟ್ಟಡ ತೆರವು

03:58 PM Apr 04, 2022 | Team Udayavani |

ಶಿರ್ವ: ಕಾಪು ತಾಲೂಕು ಶಿರ್ವ ಗ್ರಾಮದ ಸ.ನಂ.441/1ಬಿ1ಬಿಪಿ1 ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅನಧಿಕೃತ ಕಟ್ಟಡವನ್ನು ಕಾಪು ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿಯವರ ಆದೇಶದಂತೆ ಕಂದಾಯ ಇಲಾಖೆ,ಶಿರ್ವ ಗ್ರಾ.ಪಂ. ಆಡಳಿತ ಮತ್ತು ಶಿರ್ವ ಪೊಲೀಸರ ಸಹಕಾರದೊಂದಿಗೆ ಎ. 4 ರಂದು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

Advertisement

ಶಿರ್ವ ಪೊಲೀಸ್‌ ಠಾಣೆಯ ಬಳಿ ಸ.ನಂ.441/1ಬಿ1ಬಿಪಿ1 ಸರಕಾರಿ ಜಾಗದಲ್ಲಿ ಹಾವೇರಿ ಜಿಲ್ಲೆಯ ಪದ್ಮಾಬಾಯಿ ಕೋಂ ಪ್ರಿಯಾ ನಾಯಕ್‌ ಅವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಸರಕಾರಿ ಜಮೀನು ಒತ್ತುವರಿ ಮಾಡಿದ ಬಗ್ಗೆ ಶಿರ್ವ ಗ್ರಾಮ ಕರಣಿಕರು ನೀಡಿದ ವರದಿಯನ್ನು ಕಾಪು ಕಂದಾಯ ನಿರೀಕ್ಷಕರು ಕಾಪು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದ್ದರು. ಒತ್ತುವರಿ ಮಾಡಲಾಗಿದ್ದ ಸರಕಾರಿ ಜಮೀನನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ ಕಚೇರಿಯಿಂದ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರಿಗೆ ನೋಟೀಸು ನೀಡಲಾಗಿದ್ದರೂ,ಜಮೀನನ್ನು ತೆರವುಗೊಳಿಸಿರಲಿಲ್ಲ.

ಒತ್ತುವರಿ ಸರಕಾರಿ ಜಮೀನನ್ನು ತೆರವುಗೊಳಿಸಿಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡುವ ಸಲುವಾಗಿ ಕಾಪು ತಹಶೀಲ್ದಾರ್‌ ಅವರು ಕಾಪು ಕಂದಾಯ ನೀರೀಕ್ಷಕರಿಗೆ ನೀಡಿದ ಆದೇಶದಂತೆ  ಅಕ್ರಮ ಕಟ್ಟಡವನ್ನು ಸೋಮವಾರ ತೆರವುಗೊಳಿಸಲಾಗಿದೆ.

Advertisement

ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌ ಪಾಟ್ಕರ್‌, ಪಂ. ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌,ಶಿರ್ವ ಗ್ರಾಮ ಕರಣಿಕ ವಿಜಯ್‌, ಸಹಾಯಕ ಭಾಸ್ಕರ್‌, ಶಿರ್ವ ಠಾಣೆಯ ಪೊಲೀಸ್‌ ಸಿಬಂದಿ,ಗ್ರಾ.ಪಂ. ಸದಸ್ಯರು,ಶಿರ್ವ ಗ್ರಾ.ಪಂ. ಸಿಬಂದಿಗಳಾದ ಪ್ರೇಮನಾಥ್‌, ಪ್ರವೀಣ್‌ ಸಾಲಿಯನ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next