Advertisement

ಬಿಡಿಎನಿಂದ ಒತ್ತುವರಿ ತೆರವು: 3.2 ಕೋಟಿ ರೂ. ನಿವೇಶನ ವಶಕ್ಕೆ

11:20 AM Jul 10, 2024 | Team Udayavani |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಂಗಳವಾರ ರಘುವನ ಹಳ್ಳಿ, ದೊಡ್ಡಕಲ್ಲಸಂದ್ರ ಮತ್ತು ತಿಪ್ಪಸಂದ್ರ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿದೆ.

Advertisement

ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ದೊಡ್ಡಕಲ್ಲಸಂದ್ರ, ರಘುವನಹಳ್ಳಿ ಮತ್ತು ತಿಪ್ಪಸಂದ್ರ ಗ್ರಾಮ ಹಾಗೂ ಇತರೆ ಗ್ರಾಮಗಳ ಹಲವಾರು ಸರ್ವೆ ನಂಬರ್‌ಗಳಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರದಿಂದ ಸುಮಾರು 191 ಎಕರೆ 02 ಗುಂಟೆ ಜಮೀನನ್ನು ಬಿಡಿಎಯಿಂದ ಅನುಮೋದಿತ ನಕ್ಷೆಯನ್ನು ಪಡೆದು, ಬ್ಯಾಂಕ್‌ ಆಫೀಸರ್ಸ್‌ ಮತ್ತು ನೌಕರರುಗಳ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಇವರಿಗೆ ನೀಡಲಾಗಿತ್ತು.

ಅನುಮೋದಿತ ನಕ್ಷೆಯಂತೆ ಬಡಾವಣೆಯನ್ನು ರಚನೆ ಮಾಡದೇ ಪ್ರಾಧಿಕಾರಕ್ಕೆ ಪರಿತ್ಯಾಜನಾ ಪತ್ರದ ಮೂಲಕ ನೋಂದಾಯಿಸಿಕೊಟ್ಟಿರುವ ಪಾರ್ಕ್‌ ಸ್ಥಳಗಳಲ್ಲಿ ನಿವೇಶನ ಗಳನ್ನು ಮಾರಾಟ ಮಾಡಿ ಪ್ರಾಧಿಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಉದ್ಯಾನವನ ಮತ್ತು ಆಟದ ಮೈದಾನದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿದ್ದ ಸುಮಾರು 2 ಎಕರೆ ಪ್ರದೇಶವನ್ನು ಹಾಗೂ ನಾಗರಿಕ ಸೌಲಭ್ಯ ನಿವೇಶನದಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ.

ಸುಮಾರು 4 ಗುಂಟೆ ಪ್ರದೇಶವನ್ನು ಪ್ರಾಧಿಕಾರವು ವಶಪಡಿ ಸಿಕೊಂಡಿದೆ. ವಶಪಡಿಸಿಕೊಂಡಿರುವ ನಾಗರಿಕ ಸೌಲಭ್ಯ ನಿವೇಶನದ ಬೆಲೆ ಸುಮಾರು 3.20 ಕೋಟಿ ರೂ.ಗಳಾಗಿವೆ. ಈ ಕಾರ್ಯಾಚರಣೆಯಲ್ಲಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರು, ಇನ್‌ಸ್ಪೆಕ್ಟರ್‌, ಅಭಿಯಂತ ರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸ್ಥಳೀಯ ಪೊಲೀಸ್‌ ಇಲಾಖೆಯು ಸಹಕಾರ ನೀಡಿದೆ ಎಂದು ಪ್ರಕಟಣೆಯಲ್ಲಿ ಬಿಡಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next