ಬೀದರ: ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವು ಮತ್ತು ಸ್ಥಳಾಂತರಗೊಳಿಸಲು ಅಂತಹವುಗಳನ್ನು ಗುರುತಿಸುವ ಕಾರ್ಯವು ಸಮಾರೋಪಾಧಿಯಲ್ಲಿ ನಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿ ಸಿದಂತೆ ಡಿಸಿ ಕಚೇರಿ ಸಭಾಂಗಣದಲ್ಲಿ ತಾಲೂಕುಗಳ ತಹಶೀಲ್ದಾರ್‌ಗಳ ಜತೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ರಸ್ತೆಗಳು ಸಾರ್ವಜನಿಕರ ಸ್ವತ್ತು. ಜನರು ನಿತ್ಯ ಸುತ್ತಾಡುವ ರಸ್ತೆಗಳಲ್ಲಿ ಅನುಮತಿ ಪಡೆಯದೇ ಯಾವುದೇ ಕಡೆಗಳಲ್ಲಿ ಧಾರ್ಮಿಕ ಕಟ್ಟಡಗಳು ಇರಕೂಡದು ಎಂಬ ನಿಯಮ ಪಾಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿರುವ ಧಾರ್ಮಿಕ ಕಟ್ಟಡಗಳು ಮತ್ತು ಪ್ರತಿಮೆಗಳನ್ನು ನಿರ್ಮಿಸಿದ್ದರೆ ಅವನ್ನು ತೆರವುಗೊಳಿಸಲು ಕಡ್ಡಾಯ ಮೊದಲು ನೋಟಿಸ್ ರವಾನಿಸಬೇಕು. ಆದಾಗ್ಯೂ ಸಂಬಂಧಿಸಿ ದವರು ತೆರವುಗೊಳಿಸಲು ಮುಂದಾಗದಿದ್ದಲ್ಲಿ ಎರಡನೇ ಬಾರಿಗೆ ಮತ್ತೂಮ್ಮೆ ನೋಟಿಸ್ ನೀಡಿ ಆ ಬಳಿಕ ತೆರವು ಕಾರ್ಯಾಚರಣೆ ನಡೆಸಬೇಕೆಂದು ಜಿಲ್ಲಾ ಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ್, ಎಸ್‌ಪಿ ನಾಗೇಶ ಡಿ.ಎಲ್., ಅಪರ ಡಿಸಿ ರುದ್ರೇಶ ಘಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ,
ಭುವನೇಶ ಪಟೇಲ್, ತಹಶೀಲ್ದಾರ್ ಗಂಗಾದೇವಿ ಸಿ.ಎಚ್. ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.