Advertisement

ಅನ್ಯಭಾಷೆಯ ನಾಮಫ‌ಲಕ ತೆರವು

12:41 AM Dec 19, 2019 | Lakshmi GovindaRaj |

ಬೆಂಗಳೂರು: ನಾಮಫ‌ಲಕಗಳಲ್ಲಿ ಶೇ 60 ಕನ್ನಡ ಅಳವಡಿಸಿಕೊಳ್ಳುವಂತೆ ನೋಟಿಸ್‌ ಜಾರಿ ಮಾಡಿದರೂ ಎಚ್ಚೆತ್ತುಕೊಳ್ಳದ ಉದ್ದಿಮೆಗಳ ನಾಮಫ‌ಲಕ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ನಡೆಸಿದರು. ಜಯನಗರ ಮಾರುಕಟ್ಟೆ, ಬಸವನಗುಡಿ, ಚಿಕ್ಕಪೇಟೆ, ವಿಜಯನಗರ, ಪದ್ಮನಾಭನಗರ, ಕೋರಮಂಗಲ, ಜಯನಗರ, ರಾಜಾಜಿನಗರದ ಓರಾಯನ್‌ ಮಾಲ್‌ ಸೇರಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸಿ ಆರೋಗ್ಯಾಧಿಕಾರಿಗಳು ಒಟ್ಟು 207 ಮಳಿಗೆಗಳ ಅನ್ಯಭಾಷೆಯ ನಾಮಫ‌ಲಕ ತೆರವು ಮಾಡಿದ್ದಾರೆ.

Advertisement

ಅಧಿಕಾರಿಗಳೊಂದಿಗೆ ವ್ಯಾಪಾರಿಗಳ ವಾಗ್ವಾದ: ನಾಮಫ‌ಲಕ ತೆರವು ಕಾರ್ಯಾಚರಣೆ ವಾಗ್ವಾದಕ್ಕೂ ಕಾರಣವಾಯಿತು. ಜಯನಗರದಲ್ಲಿ ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ ಬುಧವಾರ ನಾಮಫ‌ಲಕ ತೆರವು ಕಾರ್ಯಾಚರಣೆ ನಡೆಯಿತು. ಈ ವೇಳೆ ಅನ್ಯ ಭಾಷೆಯ ನಾಮಫ‌ಲಕ ತೆರವು ಮಾಡದಂತೆ ವ್ಯಾಪಾರಿಗಳು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಇನ್ನು ರಾಜಾಜಿನಗರ ಓರೆಯನ್‌ ಮಾಲ್‌ನಲ್ಲಿ ಆರೋಗ್ಯಾಧಿಕಾರಿ ಬಾಲಚಂದ್ರ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳು ತಪಾಸಣೆ ನಡೆಸಿದರು.

ಈ ವೇಳೆ ಮಾಲ್‌ನ ನೆಲ ಮಹಡಿಯಲ್ಲಿ ಮಾತ್ರ 30 ಮಳಿಗೆಗಳಲ್ಲಿ ಕನ್ನಡ ನಾಮಫ‌ಲಕ ಅಳವಡಿಕೆ ಮಾಡಿಕೊಂಡಿದ್ದು, ಹಲವು ಮಳಿಗೆಗಳು ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳದೆ ಇರುವುದು ಬೆಳಕಿಗೆ ಬಂದಿದೆ. ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಬಾಲಚಂದ್ರ ತಿಳಿಸಿದ್ದಾರೆ.

ಸ್ಥಳ ನೋಟಿಸ್‌ ನೀಡಲಾಗಿರುವ ಉದ್ದಿಮೆ ನಾಮಫ‌ಲಕ ತೆರವು
ಜಯನಗರ 118 58
ವಿಜಯನಗರ 133 17
ಪದ್ಮನಾಭನಗರ 55 30
ಬಿಟಿಎಂ ಲೇಔಟ್‌ 60 18
ಚಿಕ್ಕಪೇಟೆ 150 52
ಒಟ್ಟು 586 207

ಪರವಾನಗಿ ಇಲ್ಲದ ಉದ್ದಿಮೆಗಳಿಗೆ ನೋಟಿಸ್‌
ಬೆಂಗಳೂರು: ಪಾಲಿಕೆ ಈಗ ನಗರದ ಎಲ್ಲ ಉದ್ದಿಮೆಗಳಿಗೂ ನಾಮಫ‌ಲಕಗಳಲ್ಲಿ ಶೇ 60 ಕನ್ನಡಕ್ಕೆ ಆದ್ಯತೆ ಕೊಡುವಂತೆ ನೋಟಿಸ್‌ ನೀಡುತ್ತಿದ್ದು, ಇದರಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ವ್ಯಾಪಾರ ನಡೆಸುತ್ತಿರುವ ಮಾಲೀಕರೂ ಇದ್ದಾರೆ. ಬಿಬಿಎಂಪಿಯಿಂದ ಅಧಿಕೃತವಾಗಿ 48 ಸಾವಿರ ಉದ್ದಿಮೆಗಳು ಪರವಾನಗಿ ಪಡೆದಿವೆ. ಆದರೆ, ನಗರದಲ್ಲಿ ಲಕ್ಷಾಂತರ ಅನಧಿಕೃತ ಮಳಿಗೆಗಳಿವೆ. ಈಗ ಬಿಬಿಎಂಪಿ ಅಧಿಕೃತ, ಅನಧಿಕೃತ ಎಂದು ನೋಡದೆ ಎಲ್ಲ ಮಳಿಗೆಗಳಿಗೂ ನೋಟಿಸ್‌ ನೀಡುತ್ತಿದೆ.

Advertisement

ಪಾಲಿಕೆಯ ಅಧಿಕಾರಿಗಳು ನಗರದಲ್ಲಿ ಎಲ್ಲ ಉದ್ದಿಮೆಗಳಿಗೂ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಮಾಡಿದ ನಾಮಫ‌ಲಕಗಳನ್ನು ಅಳವಡಿಕೆ ಮಾಡುವಂತೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ನಾಮಫ‌ಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ, ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಪಾಲಿಕೆ ಸೂಚಿಸಿತ್ತು. ಆದರೆ, ಪರವಾನಗಿ ಪಡೆದು ಉದ್ದಿಮೆ ನಡೆಸುತ್ತಿರುವುದಕ್ಕಿಂತ ಹೆಚ್ಚಿನ ಸಂಖ್ಯೆಉದ್ದಿಮೆಗಳು ಅನಧಿಕೃತವಾಗಿ ನಡೆಯುತ್ತಿರುವುದರಿಂದ ಎಲ್ಲ ಉದ್ದಿಮೆಗಳ ಮಾಲೀಕರಿಗೂ ನೋಟಿಸ್‌ ನೀಡಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

-48,440 ಬಿಬಿಎಂಪಿಯಿಂದ ಪರವಾನಗಿ ಪಡೆದಿರುವ ಉದ್ದಿಮೆಗಳು
-55 ಸಾವಿರ ನೋಟಿಸ್‌ ನೀಡಲಾಗಿರುವ ಉದ್ದಿಮೆಗಳು

ಅಧಿಕೃತ ಪರವಾನಗಿ ಪಡೆದ ಉದ್ದಿಮೆಗಳ ವಿವರ (ನ.30)
ವಲಯ ಪರವಾನಗಿ ಉದ್ದಿಮೆ ಪರಿಶೀಲಿಸಿರುವ ಉದ್ದಿಮೆ ನೋಟಿಸ್‌ಜಾರಿ ಮಾಡಿದ ಉದ್ದಿಮೆ ಕನ್ನಡ ನಾಮಫ‌ಲಕ ಅಳವಡಿಸಿಕೊಂಡ ಉದ್ದಿಮೆ
ದಕ್ಷಿಣ 11,044 9,310 6,850 2,460
ಪೂರ್ವ 8,293 7,933 5,882 2,051
ಪಶ್ಚಿಮ 13,487 9,820 2,846 6,974
ಯಲಹಂಕ 4,770 3,760 3,182 578
ಮಹದೇವಪುರ 5,046 4,965 2,273 2,692
ಬೊಮ್ಮನಹಳ್ಳಿ 3,047 3,525 2,712 813
ದಾಸರಹಳ್ಳಿ 2,434 2,467 528 1,939
ಆರ್‌ಆರ್‌ನಗರ 319 956 656 300
ಒಟ್ಟು 48,440 42,736 24,929 17,807

Advertisement

Udayavani is now on Telegram. Click here to join our channel and stay updated with the latest news.

Next