Advertisement

ಚುನಾವಣೆ ಬಳಿಕವೇ ಫೆಡರಲ್‌ ಫ್ರಂಟ್‌ ಸ್ಪಷ್ಟ ಚಿತ್ರಣ: ರಾಮ ರಾವ್‌

12:21 PM Mar 11, 2019 | Team Udayavani |

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಪ್ರತಿಪಾದಿಸಿರುವ ಬಿಜೆಪಿಯೇತರ, ಕಾಂಗ್ರೆಸೇತರ ಫೆಡರಲ್‌ ಫ್ರಂಟ್‌ ಮೇ 23ರಂದು ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಪಡೆಯಲಿದೆ ಎಂದು ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್‌ ಇಂದು ಸೋಮವಾರ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಚುನಾವಣೆಗಳನ್ನು ಒಂದೇ ದಿನ ಇಟ್ಟಿರುವ ಚುನಾವಣಾ ಆಯೋಗವನ್ನು ಅಭಿನಂದಿಸಿ, ಇದರಿಂದ ಎರಡೆರಡು ಕಡೆಗಳಲ್ಲಿ ಮತದಾನ ನಡೆಯುವುದು ತಪ್ಪುವಂತಾಗಿದೆ ಎಂದು ಹೇಳಿದರು. 

ಫೆಡರಲ್‌ ಫ್ರಂಟ್‌ ವಿಚಾಯದಲ್ಲಿ ಮುಖ್ಯಮಂತ್ರಿ ಕೆಸಿಆರ್‌ ಅವರು ಐದು ಅಥವಾ ಆರು ರಾಜ್ಯಗಳಿಗೆ ಭೇಟಿ ನೀಡಿ ಅನೇಕ ನಾಯಕರೊಂದಿಗೆ ಚರ್ಚಿಸಿದ್ದಾರೆ ಎಂದು ರಾವ್‌ ಹೇಳಿದರು. 

”ನಮ್ಮ ಆಲೋಚನೆ, ಚಿಂತನೆಗಳನ್ನು ನಾವು ವಿವಿಧ ನಾಯಕರೊಂದಿಗೆ ವಿನಿಮಯಿಸಿಕೊಂಡಿದ್ದೇವೆ. ನಮ್ಮ ನಂಬಿಕೆ ಪ್ರಕಾರ ಎನ್‌ಡಿಎಗೆ 160 ರಿಂದ 170 ಸೀಟುಗಳು ಸಿಗಬಹುದು; ಬಿಜೆಪಿ 140 ರಿಂದ 150 ಸೀಟುಗಳಿಗೆ ಸೀಮಿತವಾಗಬಹುದು; ಇದರ ಎಲ್ಲ ಮಿತ್ರ ಪಕ್ಷಗಳಿಂದ 20 ಅಥವಾ 30 ಸೀಟುಗಳ ಕಾಣಿಕೆ ಸಿಗಬಹುದು; ಎಂದರೆ ಎನ್‌ಡಿಎ ಗೆ ಅಗತ್ಯವಿರುವ  ಮ್ಯಾಜಿಕಲ್‌ ನಂಬರ್‌ 272 ಸೀಟುಗಳಿಗೆ ಕನಿಷ್ಠ ನೂರು ಸೀಟುಗಳ ಕೊರತೆ ಉಂಟಾಗಬಹುದು; ಈ ಹಿನ್ನೆಲೆಯಲ್ಲಿ ಫೆಡರಲ್‌ ಫ್ರಂಟ್‌ ರಚನೆಗೆ ಅವಕಾಶ ಲಭಿಸುತ್ತದೆ”  ಎಂದು ರಾವ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next