Advertisement
ಇಂದು ಪಟ್ಟಣದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ 16 ರಾಷ್ಟ್ರಗಳಲ್ಲಿ ಮಸೀದಿಗಳ ಮೈಕ್ ಅಳವಡಿಕೆಯನ್ನು ತಡೆಗಟ್ಟಿದ್ದು, ಅದರಲ್ಲೂ ಇಂಡೋನೇಷ್ಯಾ, ಪಾಕಿಸ್ತಾನ ಸೇರಿದಂತೆ 6 ಮುಸ್ಲಿಂ ರಾಷ್ಟ್ರಗಳಲ್ಲಿ ಮೈಕ್ ಅಳವಡಿಕೆಯನ್ನು ತಡೆಗಟ್ಟಿದ್ದಾರೆ. ನಮ್ಮ ಭಾರತ ದೇಶದ ಮುಸ್ಲಿಂರ ಮಸೀದಿಯ ಮೇಲೆ ಮೈಕ್ ಅಳವಡಿಕೆಯನ್ನು ತಡೆಗಟ್ಟುವ ಕೆಲಸ ಏಕೆ ಮಾಡುತ್ತಿಲ್ಲ. ಅದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಇದನ್ನೂ ಓದಿ:ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ʼಗುಡ್ ನ್ಯೂಸ್ʼ: 7ನೇ ವೇತನ ಆಯೋಗದ ಬದಲಾವಣೆ
ದೇಶದ ಸಂವಿಧಾನ ಎಲ್ಲರಿಗೂ ಆರೋಗ್ಯ, ನಿದ್ದೆ, ಶಿಕ್ಷಣ, ಪ್ರಾರ್ಥನೆ ಸೇರಿದಂತೆ ಅನೇಕ ಸ್ವಾತಂತ್ರ್ಯ ಹಕ್ಕು ಕೊಟ್ಟಿದೆಯಾದರೂ, ಶಬ್ದ ಮಾಲಿನ್ಯದಿಂದ ಸಂವಿಧಾನದ ಹಾಗೂ ನ್ಯಾಯಾಲಯದ ಆಜ್ಞೆ ಉಲ್ಲಂಘನೆಯಾಗುತ್ತಿದೆ. ವೃದ್ಧರ, ವಿದ್ಯಾರ್ಥಿಗಳ, ಕಾರ್ಮಿಕರ, ರೋಗಿಗಳ, ಸಾಮಾನ್ಯ ಜನರ ನೆಮ್ಮದಿಗೆ ಭಂಗಗೊಳಿಸುತ್ತಿರುವುದು, ಸಂವಿಧಾನ ವಿರೋಧಿಯಾಗುತ್ತಿರುವುದು ತಮ್ಮ ಗಮನಕ್ಕೆ ಬರುತ್ತಿಲವೇ. ಕೂಡಲೇ ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಗೂ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮುಖಂಡ ಧಾರವಾಡ ಗಿರೀಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಬೆಣ್ಣೆ, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ಮುಖಂಡ ಭವರ್ ಸಿಂಗ್, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಈಶ್ವರಪ್ಪ,ರಾಜ್ ಭಜರಂಗಿ,ಶರತ್, ಎಬಿವಿಪಿ ಭಾಗ್ಯಾರಾಜ್, ಶ್ರೀನಿವಾಸ, ಪರಶುರಾಮ ,ಹಿಂದೂ ಸಂಘಟನೆಗಳ ಮುಖ್ಯಸ್ಥರು ಇದ್ದರು.