Advertisement

Tungabhadra Reservoir ಕ್ರಸ್ಟ್‌ ಗೇಟ್ ಕುಸಿತದ ಸ್ಪಷ್ಟ ಮಾಹಿತಿ ತಿಳಿಯಬೇಕಿದೆ: ಪಾಟೀಲ

11:01 AM Aug 11, 2024 | keerthan |

ವಿಜಯಪುರ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕುಸಿತ ಪ್ರಕರಣದ ವಾಸ್ತವಿಕತೆ ಮಾಹಿತಿ ತಿಳಿಯದೆ ಮಾತನಾಡುವುದು ಸರಿಯಲ್ಲ ಎಂದಿರುವ ಜಲಸಂಪನ್ಮೂಲ ಖಾತೆ ನಿರ್ವಹಿಸಿದ ಅನುಭವ ಇರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಯಾವ ಕಾರಣಕ್ಕೆ ಘಟನೆ ಆಗಿದೆ ಎನ್ನುವ ಬಗ್ಗೆ ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಪ್ರಕರಣಕ್ಕೆ ತಾಂತ್ರಿಕವಾಗಿ ಕಾರಣವಾಗಿರುವ ಸಮಸ್ಯೆ ಬಗ್ಗೆ ತಿಳಿಯಬೇಕಿದೆ ಎಂದರು.

ಜಲಸಂಪನ್ಮೂಲ ಖಾತೆ ಹೊಂದಿರುವ ಶಿವಕುಮಾರ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇಂಥ ಘಟನೆ ಸಂದರ್ಭದಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಿದ್ದರೆ ನೀರು ಪೋಲು ಆಗ್ತಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ನವಲಿ ‌ಸಮಾನಾಂತರ ಜಲಾಶಯ ನಿರ್ಮಾಣ ಅಂತರ ರಾಜ್ಯ ಯೋಜನೆ. ಹೀಗಾಗಿ ಕರ್ನಾಟಕ ರಾಜ್ಯ ಮಾತ್ರ ಈ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

Advertisement

ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಎರಡು ರಾಜ್ಯದವರ ಭಾವನೆಯನ್ನು ನ್ಯಾಯಾಲಯದಲ್ಲಿ ಚರ್ಚೆ ಮಾಡಬೇಕಾಗುತ್ತದೆ ಎಂದರು.

ತುಂಗಭದ್ರಾ ಮಂಡಳಿಯಲ್ಲಿ ಎರಡು ರಾಜ್ಯಗಳ ಚರ್ಚೆಯೂ ಆಗಬೇಕಾಗುತ್ತದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

ನವಲಿ ಬಳಿ ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒತ್ತು ಕೊಡುವ ಕುರಿತು ಡಿಸಿಎಂ ಶಿವಕುಮಾರ ಜೊತೆ ಮಾತನಾಡುತ್ತೇನೆ ಎಂದರು.

ನಿರ್ವಹಣೆ ಕೊರತೆಯಿಂದ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಲಿಂಕ್ ಕಟ್ ಆಗಿದೆ ಎಂದು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಏನಾಗಿದೆ ಎಂದು ನೋಡೋಣ. ಘಟನೆ ಏಕಾಯಿತು ಎಂದು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಘಟನೆಯಿಂದ ಇತರೆ ಜಲಾಶಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ಈ ವಿಷಯದಲ್ಲಿ ನಮ್ಮ ಸರ್ಕಾರ ಅಧಿಕಾರಿಗಳ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.

ಡಿಕೆಶಿ ಭೇಟಿ ಸಾಧ್ಯತೆ

ತುಂಗಭದ್ರಾ ಡ್ಯಾಮ್ ನ 19ನೇ ಗೇಟ್ ಕಟ್ಟಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ನದಿಪಾತ್ರಕ್ಕೆ ಹರಿದು ಹೋಗುತ್ತಿದ್ದು ಈ ಕುರಿತಂತೆ ಪರಿಶೀಲನೆ ನಡೆಸಲು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಡ್ಯಾಮ್ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next