Advertisement

ಎಸ್‌ಎಸ್‌ಎಫ್ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ

08:52 PM Jun 11, 2021 | Team Udayavani |

ತುಮಕೂರು: ಕರ್ನಾಟಕ ಮುಸ್ಲಿಂ ಜಮಾತ್‌, ಎಎಸ್‌ಎಸ್‌ಎಫ್ ಹಾಗೂ ಸಹಾಯ ಸಂಸ್ಥೆಯಿಂದ ಸ್ವತ್ಛತಾಆಂದೋಲನ ನಡೆಯುತ್ತಿದ್ದು, ಇದರ ಅಂಗವಾಗಿ ನಗರದಟೌನ್‌ ಹಾಲ್‌ ಬಳಿಯ ಜಲ್ಕ ಮಾಖನ್‌ ದರ್ಗಾದಲ್ಲಿಸ್ಯಾನಿಟೈಸರ್‌ ಸಿಂಪಡನೆ ಮಾಡುವ ಮೂಲಕ ಸ್ವತ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.

Advertisement

ಕರ್ನಾಟಕ ಮುಸ್ಲಿಂ ಜಮಾತ್‌ ಹಾಗೂ ಸಹಾಯ ಸಂಸ್ಥೆಯುಲಾಕ್‌ಡೌನ್‌ ಸಮಯದಲ್ಲಿ ಹಸಿದವರಿಗೆ, ವಲಸೆ ಕಾರ್ಮಿಕರಿಗೆ,ಪ್ರಯಾಣಿಕರಿಗೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇದ್ದಸೋಂಕಿತರಿಗೆ ಇದುವರೆಗೂ ಉಚಿತವಾಗಿ ಆಹಾರ ನೀಡುತ್ತಾಸಮಾಜ ಸೇವೆ ಸಲ್ಲಿಸುತ್ತಿದ್ದು, ಈಗ ಸ್ವತ್ಛತೆ ಬಗ್ಗೆ ಸಾರ್ವಜನಿಕರಲ್ಲಿಅರಿವು ಮೂಡಿಸುತ್ತಿದ್ದು, ಕೊಳಚೆ ಪ್ರದೇಶಗಳು, ಸ್ಲಂ ಸೇರಿದಂತೆ ತುಮಕೂರು ನಗರದ ಮಂದಿರ-ಮಸೀದಿ ಹಾಗೂ ಚರ್ಚುಗಳಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಸ್ಯಾನಿಟೈಸ್‌ ಸಿಂಪರಣೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅಹಮದ್‌ ಮಾತನಾಡಿ,ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಸ್ವತ್ಛತೆ ಅತ್ಯಮೂಲ್ಯ ವಾಗಿದೆ.ಪ್ರತಿ ಬಾರಿ ನಾವು ಪಾಲಿಕೆಯನ್ನು ದೂರುವ ಬದಲು ಇಂತಹಸಂಘ-ಸಂಸ್ಥೆಗಳನ್ನು ಬಳಸಿಕೊಂಡು ಸ್ವತ್ಛತೆ ಕಾಪಾಡಬೇಕು ಎಂದರು.ಮುಸ್ಲಿಂ ಜಮಾತ್‌ನ ಜಂಟಿ ಕಾರ್ಯದರ್ಶಿ ಮಹಮ್ಮದ್‌ಆರಿಜ್‌ ರಾಝಾ ಮಾತನಾಡಿ, ಸಾರ್ವಜನಿಕರು ಸ್ವತ್ಛತೆಯನ್ನುಕಾಪಾಡಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಎಲ್ಲರೂ ಸ್ವತ್ಛತೆಗೆ ಆದ್ಯತೆ ನೀಡಬೇಕುಎಂದರು. ಎಸ್ಸೆಸ್ಸೆಫ್ ಅಧ್ಯಕ್ಷ ಸುಹೇಲ್‌, ಮೌಸಿ ನಯಾಜ್‌,ಜಮಾಲ್‌ ಶರೀಫ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next